ನ್ಯೂಸ್ ನಾಟೌಟ್: ಎರಡು ಕಾಡಾನೆಗಳ ನಡುವೆ ಸುಳ್ಯದ ಮಂಡೆಕೋಲು ಗ್ರಾಮದ ಕನ್ಯಾನ ಬಳಿ ಭೀಕರ ಕಾದಾಟ ನಡೆದಿದೆ. ಈ ಕಾದಾಟದಲ್ಲಿ ಅಂದಾಜು 65 ವರ್ಷದ ಕಾಡಾನೆ ಸಾವಿಗೀಡಾಗಿದೆ.
ಸದ್ಯ ಮದ ಬಂದ ಒಂದು ಆನೆಗೆ ಜನವರಿಯಿಂದ ಮಾರ್ಚಿ ತನಕ ಮಸ್ತಿನಲ್ಲಿರುತ್ತದೆ. ಆ ಸಮಯದಲ್ಲಿ ಎದುರು ಸಿಗುವ ಬೇರೆ ಒಂಟಿ ಆನೆಗಳ ಮೇಲೆ ದಾಳಿ ಮಾಡುತ್ತದೆ. ಇದೆ ರೀತಿ ಈ ಹಿಂದೆ ಹಲವಾರು ಸಾಕಾನೆಗಳ ಮೇಲೂ ಸಹ ದಾಳಿ ನಡೆದ ಉದಾಹರಣೆಗಳಿವೆ. ಒಂದು ಸಲ ಮದ ಬಂದ ಆನೆಗೆ ಸುಮಾರು 90 ದಿನಗಳ ಕಾಲ ಮದವಿರುತ್ತದೆ.