ನ್ಯೂಸ್ ನಾಟೌಟ್ : ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ ಎಂದು ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವದೆಹಲಿ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಚಾರ ನಡೆಸಿದ ವೇಳೆ ಈ ಹೇಳಿಕೆ ನೀಡಿದ್ದಾರೆ. “ಬಿಹಾರದಲ್ಲಿ ಹೇಮಾಮಾಲಿನಿಯ ಕೆನ್ನೆಯಂತೆ ರಸ್ತೆಗಳನ್ನು ಸುಗಮಗೊಳಿಸುವುದಾಗಿ ಲಾಲು ಹೇಳಿದ್ದರು. ಆದರೆ ಲಾಲು ಸುಳ್ಳು ಹೇಳಿದ್ದರು. ನಾನು ನಿಮಗೆ ಭರವಸೆ ನೀಡುತ್ತೇನೆ. ಓಖ್ಲಾ ಮತ್ತು ಸಂಗಮ್ ವಿಹಾರ್ ನಲ್ಲಿ ನಿರ್ಮಿಸಿರುವಂತೆ, ಕಲ್ಕಾಜಿಯಲ್ಲೂ ಪ್ರಿಯಾಂಕ ಗಾಂಧಿಯವರ ಕೆನ್ನಯಂತಹ ರಸ್ತೆಗಳನ್ನು ನಿರ್ಮಿಸುತ್ತೇನೆ” ಎಂದರು. ಸದ್ಯ ಈ ಮಾತು ವಿವಾದ ಸೃಷ್ಟಿಸಿದೆ.
ಪ್ರಿಯಾಂಕಾ ಗಾಂಧಿ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ ಮಹಿಳೆಯರ ಬಗ್ಗೆ ಅವರ ಅಸಹ್ಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಬಳಿಕ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಬಿಧುರಿ, ಹೇಮಾ ಮಾಲಿನಿ ಕೂಡ ಮಹಿಳೆಯೇ. ತಪ್ಪು ಮಾಡಿದವರು ಮೊದಲು ಕ್ಷಮೆ ಕೇಳಲಿ. ಅವರು ಸರಳ ಕುಟುಂಬದಿಂದ ಬಂದವರು. ಕಾಂಗ್ರೆಸ್ ಮೊದಲು ಸರಿದಾರಿಗೆ ತರಲಿ. 140 ಕೋಟಿ ಜನ ಸಾಮಾನ್ಯರಿದ್ದಾರೆ ಅಲ್ಲವೇ? ಹೇಮಾ ಮಾಲಿನಿ ಅವರ ವಿರುದ್ಧ ಕಾಮೆಂಟ್ ಮಾಡಿದಾಗ ಅವರು ಮಹಿಳೆ ಅಲ್ಲ ಎಂದರ್ಥನಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಟೀಕೆಯ ಬಳಿಕ ಪ್ರತಿಕ್ರಿಯಿಸಿದ ಬಿಧುರಿ, ಲಾಲು ಪ್ರಸಾದ್ ಅವರು ಮಾತನಾಡಿದ್ದ ದಾಟಿಯಲ್ಲಿ ಹೇಳಿಕೆ ನೀಡಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ರೆ ವಿಷಾದಿಸುತ್ತೇನೆ ಎಂದಿದ್ದಾರೆ.
Click