ನ್ಯೂಸ್ ನಾಟೌಟ್ : ಮದುವೆಯಾದ ಬಳಿಕ ಕೆಲವರು ತಮ್ಮ ಪತ್ನಿಯನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.ಇನ್ನು ಕೆಲವರಿಗೆ ಪರಸ್ಪರ ಹೊಂದಾಣಿಕೆ ಬಾರದೇ ಇದ್ದಲ್ಲಿ ಡಿವೋರ್ಸ್ ಕೂಡ ಆಗಿರುವ ಉದಾಹರಣೆಗಳು ಸಾಕಷ್ಟಿವೆ.ಆದರೆ ಇಲ್ಲೊಬ್ಬ ಗಂಡ ತನಗೆ ಕಾಯಿಲೆ ಬಂತೆಂದು ತನ್ನ ಹೆಂಡತಿಯನ್ನೇ ಬಲಿಕೊಟ್ಟಿದ್ದಾನೆ.ಇಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆತನಿಗೆ ನಿಗೂಢ ರೋಗ ಕಾಡುತ್ತಿತ್ತು. ಹೀಗಾಗಿ ಆತ ತನ್ನ ಪತ್ನಿಯನ್ನೇ ಬಲಿ ಕೊಟ್ಟಿದ್ದಾನೆ.ಇದೀಗ ದುಷ್ಕರ್ಮಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.2020 ರಲ್ಲಿ ನಡೆದ ಘಟನೆಯಿದು. ಈತ ಪತ್ನಿಯನ್ನು ಕಡಿದು ಕೊಂದಿದ್ದ . ಕಮಲೇಶ್ ಎಂಬಾತನಿಗೆ ಫೈಲೇರಿಯಾಸಿಸ್ ಎಂಬ ನಿಗೂಢ ರೋಗವಿದ್ದು, ಈತನ ಗುರುಗಳು ಬಲಿ ಕೊಟ್ಟರೆ ರೋಗ ಗುಣವಾಗುತ್ತದೆ ಎಂದು ಸಲಹೆ ನೀಡಿದ್ದರಂತೆ, ಇದಕ್ಕೆ ನೆನಪಾಗಿದ್ದು ಆತನ ಪತ್ನಿ. ಈ ವಿಚಾರ ಬಯಲಾಗಿದ್ದು, ಡಿಸೆಂಬರ್ 11, 2020 ರಂದು ಸಂತ್ರಸ್ಥೆಯ ಪೋಷಕರು ಪೊಲೀಸರಿಗೆ ದೂರು ನೀಡಿದಾಗಲೇ.
ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕಮಲೇಶ್ ಕೃತ್ಯ ಬಯಲಾಗಿದೆ. ತನ್ನ ಅನಾರೋಗ್ಯ ಗುಣಪಡಿಸಲು ತನ್ನ ಪತ್ನಿಯನ್ನೇ ಬಲಿ ನೀಡಿದ್ದ ವಿಚಾರ ಪೊಲೀಸರಿಗೆ ಗೊತ್ತಾಯಿತು. ಬಳಿಕ ಕಮಲೇಶ್ ನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಿದ್ದರು.ಉತ್ತರ ಪ್ರದೇಶ ಸ್ಥಳೀಯ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿದ್ದು, ‘ಜೀವಾವಧಿ ಶಿಕ್ಷೆ’ ವಿಧಿಸಿದೆ. ಅಂತೆಯೇ ಈ ಪಾಪಿಗೆ 25 ಸಾವಿರ ರೂ ದಂಡ ಕೂಡ ಹೇರಿದೆ.