ನ್ಯೂಸ್ ನಾಟೌಟ್: ಶ್ವಾನವೊಂದು ತನಗೆ ಗುದ್ದಿದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೆಶದ ಸಾಗರ್ ನಗರದ ತಿರುಪತಿ ಪುರಂ ಕಾಲೋನಿಯ ನಿವಾಸಿಯಾಗಿರುವ ಪ್ರಹ್ಲಾದ್ ಸಿಂಗ್ ಘೋಶಿ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಜನವರಿ 17ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಹ್ಲಾದ್ ಕುಟುಂಬ ಸಮೇತ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದಾರೆ. ಮನೆಯಿಂದ ಸುಮಾರು 500 ಮೀಟರ್ ದೂರ ಚಲಿಸುತ್ತಿದ್ದಂತೆ ಕಾಲೋನಿಯ ತಿರುವಿನಲ್ಲಿ ಕುಳಿತ್ತಿದ್ದ ಕಪ್ಪು ನಾಯಿಗೆ ಕಾರು ಗುದ್ದಿದೆ. ಕೂಡಲೇ ಕಾರು ನಿಲ್ಲಿಸಿ ನಾಯಿಗೆ ಏನಾದರೂ ಆಗಿದೆಯೇ ಎಂದು ನೋಡಿದ್ದಾರೆ. ಆದರೆ ನಾಯಿಗೆ ಏನು ಆದ ಹಾಗೆ ಕಾಣಲಿಲ್ಲ ಬಳಿಕ ಕುಟುಂಬ ಕಾರಿನಲ್ಲಿ ಪ್ರಯಾಣ ಮುಂದುವರೆಸಿತು. ಅಷ್ಟು ಹೊತ್ತಿಗೆ ನಾಯಿ ಬೊಗಳಲು ಶುರು ಮಾಡಿ ಕಾರಿನ ಹಿಂದೆ ಓಡಿ ಬಂದಿದೆ.
ಇದಾದ ಬಳಿಕ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ರಾತ್ರಿ ಒಂದು ಗಂಟೆಯ ಸುಮಾರಿಗೆ ಪ್ರಹ್ಲಾದ್ ಕುಟುಂಬ ತಮ್ಮ ಮನೆಗೆ ಹಿಂತಿರುಗಿದ್ದಾರೆ, ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ಕಾರಿನ ಮುಂಭಾಗದ ತರಚಿದ ಕಲೆಗಳು ಅಗಿದಂತೆ ಕಂಡುಬಂದಿದೆ. ಅಲ್ಲದೆ ಇದು ಯಾವುದೋ ಪ್ರಾಣಿ ಬಾಯಿಯಿಂದ ಕಚ್ಚಿ ತರಚಿದಂತೆ ಕಂಡು ಬಂದಿದೆ. ಬಳಿಕ ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ವೇಳೆ ಪ್ರಹ್ಲಾದ್ ಅವರ ಕುಟುಂಬ ಬೆಚ್ಚಿ ಬಿದ್ದಿದೆ. ಅಂದರೆ ಮಧ್ಯಾಹ್ನ ಮದುವೆ ಸಮಾರಂಭಕ್ಕೆ ಹೋಗುವ ವೇಳೆ ತಾನು ಡಿಕ್ಕಿ ಹೊಡೆದ ಶ್ವಾನವೇ ರಾತ್ರಿ ಬಂದು ಕಾರನ್ನು ಬಾಯಿಯಿಂದ ಕಚ್ಚಿ ಕಚ್ಚಿ ಹಾನಿ ಮಾಡಿದೆ.
Click