ನ್ಯೂಸ್ ನಾಟೌಟ್ : ದೇಶದ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್.ಎನ್.ಎಲ್ ಹೆಸರಿನಲ್ಲಿ ನಕಲಿ ಹಾವಳಿದಾರರ ಬಗ್ಗೆ ಸಂಸ್ಥೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ನಕಲಿ ಉದ್ಯೋಗ ನೇಮಕಾತಿ, ಟವರ್ ಸ್ಥಾಪನೆ, ಹಣ ಉಳಿತಾಯದ ಹೆಸರಿನಲ್ಲಿ ಜನರನ್ನು ನಕಲಿ ಗುಂಪು BSNL ಹೆಸರಿನಲ್ಲಿ ಸೆಳೆಯುತ್ತಲೇ ಇದೆ. ಈ ಬಗ್ಗೆ BSNL ಜಾಗೃತರಾಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದೆ.
ಬಿಎಸ್ಎನ್ಎಲ್ 5ಜಿ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಜನರಿಗೆ ಹತ್ತಿರವಾಗುತ್ತಿದ್ದಾರೆ. ಬಿಎಸ್ಎನ್ಎಲ್ ಹೊಸ ಸೇವೆ ನೀಡಲು ಸಿದ್ದವಾಗಿದ್ದು, ಇದಕ್ಕೆ ಉದ್ಯೋಗಿಗಳ ಅಗತ್ಯತೆ ಇದೆ. ಆದ್ದರಿಂದ ಬೃಹತ್ ಉದ್ಯೋಗ ನೇಮಕಾತಿಗೆ ನಡೆಸಲಿದೆ. ಅರ್ಹರಿಂದ ಅರ್ಜಿ ಆಹ್ವಾನಿಸಲಿದೆ ಎಂದು ಫೇಕ್ ವೆಬ್ ಸೈಟ್ನಲ್ಲಿ ಜಾಹಿರಾತು ನೀಡಿದೆ ಎಂದು ಸಂಸ್ಥೆ ತಿಳಿಸಿದೆ.
ಇನ್ನೂ ಮನೆಯಲ್ಲಿಯೇ ಕುಳಿತುಕೊಂಡು ಹಣ ಗಳಿಸಬಹುದು ಮತ್ತು ಉಳಿಸಬಹುದು. ನಿಮ್ಮ ಹೆಸರಿನ ಆಸ್ತಿಯ ಜಾಗದಲ್ಲಿ ಬಿಎಸ್ಎನ್ಎಲ್ ಟವರ್ ನಿರ್ಮಿಸಲಿದೆ. ಇದಕ್ಕಾಗಿ ನೀವು ನಿಮ್ಮ ಹೆಸರು, ವಿಳಾಸ ನೀಡಬೇಕು ಎಂದು ನಕಲಿ ಸಂಖ್ಯೆಯಿಂದ ಸಂದೇಶ ಕಲುಹಿಸುತ್ತಿದ್ದಾರೆ. ಅನಗತ್ಯ ಲಿಂಕ್ ಶೇರ್ ಮಾಡಿ ಅರ್ಜಿ ಭರ್ತಿಗೆ ಸೂಚಿಸಿದ್ದಾರೆ ಇಂತಹ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
Click