ಸ್ಮಶಾನದಲ್ಲಿ ಹೂತ ದೇಹಗಳ ತಲೆಗಳು ನಾಪತ್ತೆ..! ಮಾಂತ್ರಿಕರ ಕೈವಾಡವಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು..!

ನ್ಯೂಸ್ ನಾಟೌಟ್: ಬಿಹಾರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸ್ಮಶಾನದ ಸಮಾಧಿಯಲ್ಲಿ ಹೂತಿರುವ ಮೃತ ದೇಹಗಳ ತಲೆಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮೃತದೇಹಗಳ ತಲೆಯನ್ನು ಕತ್ತರಿಸಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಸತ್ತವರ ತಲೆಗಾಗಿ ಗೋರಿಗಳನ್ನು ಕಳ್ಳಸಾಗಣೆದಾರರು ಅಗೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಮಶಾನದಲ್ಲಿ ಸಮಾಧಿಯನ್ನು ಅಗೆದಿರುವುದು ಕಂಡು ಬಂದು ಪರಿಶೀಲಿಸಿದಾಗ ಶವಗಳ ರುಂಡ ಇಲ್ಲದಿರುವುದು ಬೆಳಕಿಗೆ ಬಂದಿದೆ. ಒಂದು ಬಾರಿಯಲ್ಲ ಐದು ಬಾರಿ ಇದೇ ರೀತಿಯ ಪ್ರಕರಣಗಳು ನಡೆದಿವೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಎಸ್‌ ಡಿಪಿಒಗೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಘಟನೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಲಾಗಿದ್ದು, ಜನರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗ್ರಾಮದಲ್ಲಿರುವ ಹಳೆಯ ಸ್ಮಶಾನ ಇದಾಗಿದ್ದು, ಇಲ್ಲಿ ಮುಸ್ಲಿಂ ಸಮುದಾಯದವರ ಶವಗಳನ್ನು ಹೂಳಲಾಗುತ್ತದೆ.ಕಳೆದ ಸೋಮವಾರ(ಜ.20) ಕಳ್ಳಸಾಗಾಣಿಕೆದಾರರು ಇಲ್ಲಿನ ಸಮಾಧಿಯಲ್ಲಿ ಹೂತಿಟ್ಟಿದ್ದ ಮಹಿಳೆಯ ತಲೆಯನ್ನು ತೆಗೆದುಕೊಂಡು ಹೋಗಿದ್ದರು. ಈ ಶವ ಬದ್ರುಜಮ್ಮ ಎಂಬವರ ತಾಯಿಯದ್ದಾಗಿತ್ತು ಎನ್ನಲಾಗಿದೆ. ಇದು ಮಾಂತ್ರಿಕರ ಕೈವಾಡ, ಅವರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಘಟನೆಯಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್‌ ನ ಕೈವಾಡವಿದೆ ಎಂದು ಇನ್ನು ಕೆಲವರು ಶಂಕಿಸಿದ್ದಾರೆ. Click