ನ್ಯೂಸ್ ನಾಟೌಟ್: ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ಗೆ ಮದುವೆ ಅನ್ನೋ ವಿಚಾರ ಹೊರ ಬಿದ್ದಿದೆ. ಹೌದು, ಬಿಗ್ ಬಾಸ್ ಸೀಸನ್ ೧೧ರಲ್ಲಿ ಸ್ಪರ್ಧಿಯಾಗಿದ್ದ ಮೋಕ್ಷಿತಾಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಈಕೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ಭವಿಷ್ಯ ಹೇಳಿದ್ದ ಗುರೂಜಿ ಮೋಕ್ಷಿತಾಗೆ ಏನಾದರೂ ಕೇಳೋದಿದ್ದರೆ ಕೇಳಿ ಎಂದು ಹೇಳಿದ್ದರು. ಅದಕ್ಕೆ ಮೋಕ್ಷಿತಾ ಕೇಳೋಕೆ ಏನೂ ಇಲ್ಲ ಎನ್ನುವಂತೆ ಉತ್ತರಿಸುತ್ತಾರೆ.
ಆಗ ಗುರೂಜಿ ನೋವು , ಅಪನಿಂದನೆ ಹಾಗೂ ಅವಮಾನ ನಿನಗೆ ಸಿಕ್ಕಿದ್ದು ಇಷ್ಟೇ ಅಲ್ಲವೇ ಹಾಗಾದರೆ ಈ ವರ್ಷ ಅಂದರೆ ೨೦೨೫ ನಿನಗೆ ತುಂಬಾ ಅದೃಷ್ಟದ ವರ್ಷ ನಿನಗೆ ಮದುವೆ ಆಗುತ್ತದೆ ಎಂದಿದ್ದಾರೆ.ನಿನ್ನ ಕೆರಿಯರ್ ತುಂಬಾ ಚೆನ್ನಾಗಿದೆ ಎಂದು ಗುರೂಜಿ ಹೇಳಿದ್ದಾರೆ.