ನ್ಯೂಸ್ ನಾಟೌಟ್: ಕರ್ನಾಟಕ ಹಾಗೂ ಆಂಧ್ರ ಸಾರಿಗೆ ಬಸ್ ಗಳು ಓವರ್ ಟೆಕ್ ಪೈಪೋಟಿಗೆ ಬಿದ್ದ ಪರಿಣಾಮ ಬೈಕ್ ನಲ್ಲಿ ಹೊರಟಿದ್ದ 8 ವರ್ಷದ ಬಾಲಕಿ, ಆಕೆಯ ಸೋದರ ಮಾವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗೇಟ್ ಬಳಿ ನಡೆದಿದೆ.
ಮೃತರನ್ನು 8 ವರ್ಷದ ಮೋನಿಕಾ ಹಾಗೂ ಕೆಳಗಿನಜೋಗಹಳ್ಳಿ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಗೌರಿಬಿದನೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿತ್ತು. ಇದೇ ವೇಳೆ ಆಂದ್ರದ ಎಪಿಎಸ್ಆರ್ಟಿಸಿ ಬಸ್ ಬಂದಿದ್ದು, ಎರಡು ಬಸ್ಗಳ ನಡುವೆ ಓವರ್ ಟೆಕ್ ಪೈಪೋಟಿ ನಡೆದಿದೆ.
ಇದೇ ಸಮಯದಲ್ಲಿ 8 ವರ್ಷದ ಬಾಲಕಿ, ಆಕೆಯ ಸೋದರ ಮಾವನ ಜೊತೆ ಬೈಕ್ ನಲ್ಲಿ ಹೊರಟಿದ್ದರು. ಬಸ್ ಗಳ ಮಧ್ಯೆ ಬೈಕ್ ಸವಾರ ಸಿಲುಕಿದ್ದು, ಎಪಿಎಸ್ಆರ್ಟಿಸಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನೆಲಕ್ಕುರುಳಿದ್ದು, ಬೈಕ್ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದಿದೆ ಎನ್ನಲಾಗಿದೆ.
Click