ನ್ಯೂಸ್ ನಾಟೌಟ್: ಅಮುಲ್ ತನ್ನ 1 ಲೀಟರ್ ಪ್ಯಾಕ್ಗಳಾದ ಗೋಲ್ಡ್, ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ಬೆಲೆಯನ್ನು 1 ರೂ. ಕಡಿಮೆ ಮಾಡಿದೆ. ಈ ಕಡಿತವು 1 ಲೀಟರ್ ಪ್ಯಾಕ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಕಳೆದ ವರ್ಷ ಜೂನ್ನಲ್ಲಿ ಅಮುಲ್ ತನ್ನ ಎಲ್ಲಾ ಮಾದರಿಯ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ. ಹೆಚ್ಚಿಸಿತ್ತು. ಇದೀಗ ಅಮುಲ್ ಹಾಲಿನ ಪ್ಯಾಕ್ಗಳ ಬೆಲೆ ಲೀಟರ್ಗೆ 1 ರೂ. ಕಡಿಮೆಯಾಗಿರುವುದನ್ನು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (GCMMF) ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಘೋಷಿಸಿದ್ದಾರೆ.
ಅಮುಲ್ ಹಾಲಿನ ಬೆಲೆ ಬದಲಾವಣೆಯ ನಂತರ, 1 ಲೀಟರ್ ಅಮುಲ್ ಗೋಲ್ಡ್ ಹಾಲಿನ ಪೌಚ್ನ ಬೆಲೆ 66 ರೂ.ಗಳಿಂದ 65 ರೂ.ಗಳಿಗೆ ಇಳಿಯಲಿದೆ. 1 ಲೀಟರ್ ಅಮುಲ್ ಟೀ ಸ್ಪೆಷಲ್ ಹಾಲಿನ ಪೌಚ್ನ ಬೆಲೆ 62 ರೂ.ಗಳಿಂದ 61 ರೂ.ಗಳಿಗೆ ಇಳಿಯಲಿದೆ. ಅದೇ ರೀತಿ, ಅಮುಲ್ ತಾಜಾ ಹಾಲಿನ ದರವನ್ನು ಲೀಟರ್ಗೆ 54 ರೂ.ಗಳಿಂದ 53 ರೂ.ಗಳಿಗೆ ಇಳಿಸಲಾಗುವುದು.
ಈ ಮೊದಲು 2024ರ ಜೂನ್ ತಿಂಗಳಲ್ಲಿ ಅಮುಲ್ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿತ್ತು. ಅಮುಲ್ ಹಾಲಿನ ಬೆಲೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಿದ ನಂತರ ಮದರ್ ಡೈರಿ ಕೂಡ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಹಾಲಿನ ಬೆಲೆಗಳನ್ನು ಕಡಿಮೆ ಮಾಡುವ ಅಮುಲ್ ನಿರ್ಧಾರವು ಇತರ ಡೈರಿ ಕಂಪನಿಗಳು ಕೂಡ ಇದನ್ನು ಅನುಸರಿಸುವಂತೆ ಪ್ರಭಾವ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.