ಅಮೆರಿಕದ ಶ್ವೇತಭವನದ ಮೇಲೆ ಬೃಹತ್ ಟ್ರಕ್ ಮೂಲಕ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕ..! 8 ವರ್ಷ ಜೈಲು..!

ನ್ಯೂಸ್ ನಾಟೌಟ್: ಅಮೆರಿಕದ ಶ್ವೇತಭವನದ ಮೇಲೆ ದಾಳಿ ನಡೆಸಲು ಯತ್ನಿಸಿದ್ದ ಭಾರತ ಮೂಲದ ಯುವಕನಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಗುರುವಾರ(ಜ.17), ಅಮೆರಿಕದ ನ್ಯಾಯಾಲಯವು ಸಾಯಿ ವರ್ಷಿತ್ ಕಂದುಲಾ ಅವರನ್ನು ದಾಳಿಯ ಅಪರಾಧಿ ಎಂದು ಘೋಷಿಸಿತು. 2023ರ ಮೇ 22ರಂದು ಇಪ್ಪತ್ತು ವರ್ಷದ ಸಾಯಿ ಈ ದಾಳಿಗೆ ಯತ್ನಿಸಿದ್ದ. ಈ ದಾಳಿಯ ಉದ್ದೇಶವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಯುಎಸ್ ಸರ್ಕಾರವನ್ನು ಉರುಳಿಸುವುದು ಮತ್ತು ಅದರ ಸ್ಥಳದಲ್ಲಿ ನಾಜಿ ಸಿದ್ಧಾಂತದಿಂದ ಪ್ರೇರಿತವಾದ ಸರ್ವಾಧಿಕಾರಿ ಆಡಳಿತವನ್ನು ಸ್ಥಾಪಿಸುವುದು ಎಂದು ಯುಎಸ್ ನ್ಯಾಯಾಂಗ ಇಲಾಖೆ ಹೇಳಿದೆ.ಸಾಯಿ ಮೇ 22, 2023 ರ ಮಧ್ಯಾಹ್ನ ಸೇಂಟ್ ಲೂಯಿಸ್, ಮಿಸೌರಿಯಿಂದ ವಾಷಿಂಗ್ಟನ್‌ಗೆ ಹೊರಟರು ಮತ್ತು ಸಂಜೆ 5.20 ರ ಸುಮಾರಿಗೆ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದ. ಇಲ್ಲಿ ಸಂಜೆ 6.30ಕ್ಕೆ ಟ್ರಕ್ ಬಾಡಿಗೆಗೆ ಪಡೆದು ದಾಳಿ ನಡೆಸಿದ್ದಾನೆ. ಮಾಹಿತಿಯ ಪ್ರಕಾರ, ವಾಷಿಂಗ್ಟನ್‌ ನಲ್ಲಿ ರಾತ್ರಿ 9 ಗಂಟೆಯ ಸುಮಾರಿಗೆ, ಆತ ಟ್ರಕ್‌ ನೊಂದಿಗೆ ಶ್ವೇತಭವನ ಮತ್ತು ಅಧ್ಯಕ್ಷರ ಉದ್ಯಾನವನವನ್ನು ರಕ್ಷಿಸುವ ಬ್ಯಾರಿಕೇಡ್‌ ಗಳಿಗೆ ಡಿಕ್ಕಿ ಹೊಡೆಸಿದ್ದ. ಟ್ರಕ್ ಅನ್ನು ಫುಟ್‌ ಪಾತ್‌ ಗೆ ಓಡಿಸಿದ್ದ, ಅಲ್ಲಿ ನೆರೆದಿದ್ದ ಜನರಲ್ಲಿ ಗೊಂದಲವನ್ನು ಉಂಟುಮಾಡಿದರು. ಘಟನೆಯ ನಂತರ ಸಾಯಿ ಟ್ರಕ್‌ ನಿಂದ ಹೊರಬಂದು ಹಿಂಬದಿಯ ಕಡೆಗೆ ಹೋದನು. ಇಲ್ಲಿ ಅವನು ತನ್ನ ಚೀಲದಿಂದ ನಾಜಿ ಧ್ವಜವನ್ನು ತೆಗೆದುಕೊಂಡು ಅದನ್ನು ಬೀಸಿದ್ದಾನೆ ಎನ್ನಲಾಗಿದೆ. ಸಾಯಿ ಕಂದುಲಾ ನಂತರ ಅಮೆರಿಕದ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಿದ ಮತ್ತು ಧ್ವಂಸಗೊಳಿಸಿದ ಪ್ರಕರಣದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡರು. ಅವರು ‘ಗ್ರೀನ್ ಕಾರ್ಡ್’ ಹೊಂದಿರುವ ಅಮೆರಿಕದ ಕಾನೂನುಬದ್ಧ ಖಾಯಂ ನಿವಾಸಿಯಾಗಿದ್ದಾರೆ. Click