- +91 73497 60202
- [email protected]
- January 9, 2025 1:21 PM
ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾದ ನಟಿ ರಮ್ಯಾ..! ಆದಷ್ಟು ಬೇಗ ಮತ್ತೆ ನಟಿಸುತ್ತೇನೆ ಎಂದ ನಟಿ
ನ್ಯೂಸ್ ನಾಟೌಟ್: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ಚಿತ್ರದ ವಿವಾದಕ್ಕೆ ಸಂಬಂಧಿಸಿದ ಕೇಸ್ ಕುರಿತು ಕೋರ್ಟ್ ವಿಚಾರಣೆಗೆ ನಟಿ ರಮ್ಯಾ ಇಂದು(ಜ.7) ಹಾಜರಾಗಿದ್ದರು. ಕೋರ್ಟ್ ವಿಚಾರಣೆಯ ಬಳಿಕ ರಮ್ಯಾ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೆಲ ದಾಖಲೆಗಳನ್ನು ನೀಡಲು ಹೇಳಿತ್ತು. ಅವರು ಕೇಳಿದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ನೇರವಾಗಿ ಬಂದು ಕೊಡೋಕೆ ಹೇಳಿದ್ದರು. ಹಾಗಾಗಿ ವಿಚಾರಣೆಗೆ ಬಂದಿದ್ದೇನೆ. ಈ ಪ್ರಕರಣ ಕೋರ್ಟ್ನಲ್ಲಿರುವ ಕಾರಣಕ್ಕೆ ಹೆಚ್ಚೇನು ಮಾತನಾಡಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಮತ್ತೆ ಸಿನಿಮಾ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಬರುತ್ತೇನೆ ಎಂದು ರಮ್ಯಾ ಹೇಳಿದ್ದಾರೆ. ಜನವರಿ 15ಕ್ಕೆ ಒರಿಜಿನಲ್ ಅಗ್ರಿಮೆಂಟ್ ಕಾಪಿ ಜೊತೆಗೆ ಕೋರ್ಟ್ಗೆ ಬರಲು ರಮ್ಯಾಗೆ ಸೂಚನೆ ನೀಡಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ