ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಯಸ್ಸಿನ ಬೇಧವಿಲ್ಲದೆ, ಹೃದಯ ಕಾಯಿಲೆ ಜನರನ್ನು ಬಲಿ ಪಡೆದು ಕೊಳ್ಳುತ್ತಿದೆ.ಇತ್ತೀಚೆಗಷ್ಟೇ ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದ ಸುದ್ದಿ ತೀವ್ರ ಘಾಸಿಗೊಲಿಸುವಂತೆ ಮಾಡಿತ್ತು. ಇದೀಗ 30 ವರ್ಷದ ಸ್ಟಾರ್ ನಟ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಸುದ್ದಿ ಇಡೀ ಚಿತ್ರ ರಂಗಕ್ಕೆ ಅರಗಿಸಿಕೊಳ್ಳಲಾಗದ ನೋವನ್ನುಂಟು ಮಾಡಿದೆ.
ಹೌದು, ರಾಜಕೀಯ ಮುಖಂಡ, ನಿರ್ಮಾಪಕ ಹಾಗು ನಟರಾಗಿ ಗುರುತಿಸಿಕೊಂಡ ಭೋಜ್ ಪುರಿ ನಟ ಸುದೀಪ್ ಪಾಂಡೆ, ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ‘ ಪರೋ ಪಟ್ನವಾಲಿ ಎಂಬ ಸಿನಿಮಾದ ಶೂಟಿಂಗಾಗಿ ಸುದೀಪ್ ಪಾಂಡೆ ಅವರು ಮುಂಬೈನಲ್ಲಿದ್ದರು. 10 ದಿನಗಳ ಹಿಂದೆಯಷ್ಟೇ ತಮ್ಮ 30 ನೆಯ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸುದೀಪ್ ಪಾಂಡೆ ಅತೀ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿರುವುದು ಚಿತ್ರರಂಗಕ್ಕೆ ಶಾಕ್ ತಂದುಕೊಟ್ಟಿದೆ.