ನ್ಯೂಸ್ ನಾಟೌಟ್:ಬಸ್ಸಿನಲ್ಲಿ ಕಳೆದು ಹೋಗಿದ್ದ ಚಿನ್ನದ ಸರವನ್ನು ಸುಳ್ಯದ ಬಸ್ ಮಾಲಕರೊಬ್ಬರು ವಾರಸುದಾರರಿಗೆ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಘಟನೆ ನಡೆದಿದೆ.
ಕೋಲ್ಚಾರ್ ಮಾರ್ಗವಾಗಿ ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಸಂಚರಿಸುವ ಗುರೂಜಿ ಟ್ರಾವೆಲ್ಸ್ ನ ಬಸ್ ನಲ್ಲಿ ಈ ಘಟನೆ ನಡೆದಿದ್ದು,ಮಗುವಿನ ಚಿನ್ನದ ಸರ ಬಸ್ಸಿನ ಮಾಲೀಕ ಮೋಹನ್ ಅವರಿಗೆ ಸಿಕ್ಕಿತ್ತು.ತಕ್ಷಣವೇ ವಾರಿಸುದಾರರನ್ನು ಪತ್ತೆ ಮಾಡಿ ಹಿಂದಿರುಗಿಸಿದ್ದಾರೆ.ಮೋಹನ್ ಅವರ ಈ ಪ್ರಾಮಾಣಿಕತೆಗಾಗಿ ಅಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ.