ನ್ಯೂಸ್ ನಾಟೌಟ್: ತನ್ನ ಸಹಪಾಠಿಗಳೊಂದಿಗೆ ವಾಗ್ವಾದ ನಡೆಸಿದ 14 ವರ್ಷದ ವಿದ್ಯಾರ್ಥಿಯನ್ನು ಪೂರ್ವ ದೆಹಲಿಯ ಶಕರ್ ಪುರ ಪ್ರದೇಶದ ಶಾಲೆಯ ಹೊರಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ (ಜ.04) ತಿಳಿಸಿದ್ದಾರೆ.
ರಾಜಕೀಯ ಸರ್ವೋದಯ ಬಾಲ ವಿದ್ಯಾಲಯದಲ್ಲಿ 7 ನೇ ತರಗತಿಯಾಗಿದ್ದ ವಿದ್ಯಾರ್ಥಿ ಇಶು ಗುಪ್ತಾ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ.. ಆತನೊಂದಿಗೆ ಜಗಳವಾಡಿದ್ದ ಮತ್ತೊಬ್ಬ ವಿದ್ಯಾರ್ಥಿಯ ನೇತೃತ್ವದ ಗುಂಪು ಈ ಹತ್ಯೆ ಮಾಡಿದೆ ಎನ್ನಲಾಗಿದೆ.
“ಒಬ್ಬ ವಿದ್ಯಾರ್ಥಿಯು ಮೂರ್ನಾಲ್ಕು ಸಹಚರರೊಂದಿಗೆ ಶಾಲೆಯ ಗೇಟ್ ನ ಹೊರಗೆ ಇಶು ಗುಪ್ತಾನನ್ನು ಗುರಿಯಾಗಿಸಿ ಹಲ್ಲೆ ಮಾಡಿದೆ. ಒಬ್ಬ ಆರೋಪಿಯು ಸಂತ್ರಸ್ಥನ ಬಲ ತೊಡೆಗೆ ಇರಿದಿದ್ದು, ಮಾರಣಾಂತಿಕ ಗಾಯವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೊಲೀಸರು, ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಏಳು ಶಂಕಿತರನ್ನು ಹಿಡಿದಿದ್ದಾರೆ.
Click