- +91 73497 60202
- [email protected]
- January 8, 2025 3:04 PM
40 ಲಕ್ಷ ರೂ. ದಾಟಿದ ಪಾನೀಪುರಿ ಮಾರಾಟಗಾರನ ವಾರ್ಷಿಕ ಆದಾಯ..! ಆದಾಯ – ತೆರಿಗೆ ಇಲಾಖೆಯಿಂದ ಆತನಿಗೆ ನೋಟಿಸ್..!
ನ್ಯೂಸ್ ನಾಟೌಟ್ : ತಮಿಳುನಾಡಿನ ಪಾನೀಪುರಿ ಮಾರಾಟಗಾರನ ದುಡಿಮೆ ವಾರ್ಷಿಕ 40 ಲಕ್ಷ ರೂಪಾಯಿ ದಾಟಿದ ಹಿನ್ನಲೆಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ನೀಡಿದೆ. ವರ್ಷಾನುಗಟ್ಟಲೆ ಪದವಿ, ಸ್ನಾತಕೋತ್ತರ ಪದವಿಗಳನ್ನು ಓದಿ.. ತರಹೇವಾರಿ ಕೋರ್ಸ್ ಗಳನ್ನು ಮಾಡಿದರೂ ಸೂಕ್ತ ಉದ್ಯೋಗ ಸಿಗದ ಈ ಕಾಲದಲ್ಲಿ ಇಲ್ಲೋರ್ವ ಪಾನಿಪುರಿ ಮಾರಾಟಗಾರ ವಾರ್ಷಿಕ 40 ಲಕ್ಷ ರೂ ಸಂಪಾದನೆ ಮಾಡಿ ಆದಾಯ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ತಮಿಳುನಾಡಿನಲ್ಲಿ ಪಾನಿಪುರಿ ಮಾರಾಟಗಾರನ ವಾರ್ಷಿಕ ಆದಾಯ 40 ಲಕ್ಷ ರೂ ದಾಟಿದ ಕಾರಣಕ್ಕೇ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ಜಾರಿ ಮಾಡಿದೆ.ಇನ್ನು ಪಾನಿಪುರಿ ಮಾರಾಟಗಾರನ ಆದಾಯ ಬಹಿರಂಗವಾಗಿದ್ದು ಆತನ UPI ಪೇಮೆಂಟ್ ಗಳಿಂದ ಎಂದು ಹೇಳಲಾಗಿದೆ. ಮಾರಾಟಗಾರನ UPI ಪಾವತಿಗಳನ್ನು ಆದಾಯ ಇಲಾಖೆ ಟ್ರ್ಯಾಕ್ ಮಾಡಿದ್ದು, ಈ ವೇಳೆ ಸುಮಾರು 40 ಲಕ್ಷ ಆದಾಯ ಬಂದಿರುವುದು ತಿಳಿದು ಬಂದಿದ್ದು ಇದೇ ಕಾರಣಕ್ಕೆ ತಮಿಳುನಾಡು GST ಇಲಾಖೆ ಸಮನ್ಸ್ ಜಾರಿ ಮಾಡಿದೆ. ಪ್ರಮುಖ ಪಾವತಿ ಗೇಟ್ ವೇಗಳು, Razorpay ಮತ್ತು PhonePe ನಿಂದ ಪಡೆದ ವಹಿವಾಟಿನ ವರದಿಗಳನ್ನು ಆಧರಿಸಿ ತಮಿಳುನಾಡು ಸರ್ಕಾರ ನೊಟೀಸ್ ನೀಡಿದೆ ಎನ್ನಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ