1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಈಗ ಸನ್ಯಾಸಿ..! ಕುಂಭಮೇಳದಲ್ಲಿ ಕಾಣಿಸಿಕೊಂಡ ಕರ್ನಾಟಕದ ಸಾಧು..!

ನ್ಯೂಸ್ ನಾಟೌಟ್ : 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರುಮಾಳ್ ಈಗ ಸನ್ಯಾಸಿಯಾಗಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಈ ರೀತಿ ನೋಡಿದ ಜನರ ಅಚ್ಚರಿಪಟ್ಟಿದ್ದಾರೆ. ಡಿಸಿಯಾಗಿದ್ದಾಗ ಕಚೇರಿಯಲ್ಲಿ ಕುಳಿತ ಫೋಟೊ ಹಾಗೂ ಈಗ ಗಡ್ಡ ಜಟ ಬಿಟ್ಟಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಹಲವರು ಆಧ್ಯಾತ್ಮದ ಸತ್ಯ ತಿಳಿದು ಅತ್ತ ಮನಸ್ಸು ಮಾಡಿರಬಹುದು ಅಥವಾ ಜೀವನದ ಕಹಿ ಘಟನೆ ಆ ರೀತಿಯ ಪ್ರೇರಣೆ ನೀಡಿರಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಪ್ರಯಾಗರಾಜ್ ನಲ್ಲಿರುವ ಮಹಾ ಕುಂಭಮೇಳ‌ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಎಂತೆಂಥವರು ಸನ್ಯಾಸಿಗಳಾಗಿರುವುದು ಕಂಡು ಬರುತ್ತಿದೆ. ಜೀವನದ ಅಂತಿಮ ಸತ್ಯಕ್ಕೆ ಮನಸೋತ ಅಧ್ಯಾತದತ್ತ ವಾಲಿದ ಎಷ್ಟೋ ಜನ ಕಂಡು ಬರುತ್ತಿದ್ದಾರೆ. ಅವರ ಸಾಲಿನಲ್ಲಿ ರಾಯಚೂರಿನಲ್ಲಿ ಡಿಸಿಯಾಗಿದ್ದ ಪೆರುಮಾಳರು ಒಬ್ಬರು ಎಂಬುದು ವಿಶೇಷ. Click