- +91 73497 60202
- [email protected]
- January 25, 2025 6:39 AM
ನ್ಯೂಸ್ ನಾಟೌಟ್: 17 ವರ್ಷದ ಬಾಲಕನ ಕಿಡ್ನಾಪ್ ಮಾಡಿ ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿಯಲ್ಲಿ ವಿವಾಹಿತ ಮಹಿಳೆಯನ್ನು ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ಹುಡುಗ ನಾಪತ್ತೆಯಾದ ಬೆನ್ನಲ್ಲೇ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಪತ್ತೆ ಹಚ್ಚಿದ ಪೊಲೀಸರು 17 ವರ್ಷದ ಹುಡುಗನ ರಕ್ಷಣೆ ಮಾಡಿದ್ದಾರೆ. ಇದೇ ರೀತಿ ಅಮೆರಿಕದಲ್ಲಿ ಶಿಕ್ಷಕಿಯೊಬ್ಬಳು ಬಾಲಕನನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು.ತಮಿಳುನಾಡಿನ ಪ್ರಕರಣದಲ್ಲಿ, 10ನೇ ತರಗತಿ ಹುಡುಗ ಹಾಗೂ ಆತನ ಕುಟುಂಬ ವಾಸಿಸುತ್ತಿದ್ದ ಅದೇ ಗ್ರಾಮದಲ್ಲಿ 28ರ ಹರೆಯದ ವಿನೋಧಿನಿ ಅನ್ನೋ ವಿವಾಹಿತ ಮಹಿಳೆ ವಾಸವಾಗಿದ್ದಳು. ಇಬ್ಬರು ಮಕ್ಕಳು ಹಾಗೂ ಕುಟುಂಬದ ಜೊತೆಗಿದ್ದ ಈ ಮಹಿಳೆಗೆ 17ರ ಹುಡುಗನ ಮೇಲೆ ಪ್ರೀತಿ ಶುರುವಾಗಿದೆ. ಫೋನ್ ನಂಬರ್ ಪಡೆದು ಪ್ರತಿ ದಿನ ಕರೆ ಮಾಡಲು ಆರಂಭಿಸಿದ್ದಾಳೆ. ಹೀಗೆ ಹುಡುಗನ ಜೊತೆ ಪ್ರೀತಿ ಬೆಳೆಸಿಕೊಂಡಿದ್ದಾಳೆ. ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಕರೆಯಿಸುತ್ತಿದ್ದ ಹುಡುಗನ ಜೊತೆ ಖಾಸಗಿ ಸಮಯ ಕಳೆದಿದ್ದಾಳೆ ಎನ್ನಲಾಗಿದೆ. ಹುಡುಗನ ಪೋಷಕರು ಹಾಗೂ ಕುಟುಂಬಸ್ಥರಿಗೆ ಈ ಬಗ್ಗೆ ಸುಳಿವೇ ಇರಲಿಲ್ಲ. ಹೀಗಿರುವಾಗ ಏಕಾಏಕಿ ಶಾಲೆಗೆ ತೆರಳಿದ ಮಗ ಮನೆಗೆ ಮರಳಲಿಲ್ಲ. ರಾತ್ರಿಯಾದರೂ ಮನೆಗೆ ಮರಳಲೇ ಇಲ್ಲ. ಗಾಬರಿಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ತಡ ರಾತ್ರಿಯಾಗುತ್ತಿದ್ದಂತೆ ಬಾಲಕ ಮಿಸ್ಸಿಂಗ್ ಅನ್ನೋದು ಖಚಿತವಾಗಿದೆ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಡ ರಾತ್ರಿಯೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ವಿನೋಧಿನಿ ಮನೆಗೆ ತೆರಳಿದಾಗ ಆಕೆಯೂ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲಿಗೆ ಪೊಲೀಸರ ಅನುಮಾನ ಬಲವಾಗಿತ್ತು. ಟವರ್ ಲೊಕೇಶನ್ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಇತ್ತ ವಿನೋಧಿನಿ ತನ್ನ ಸಂಬಂಧಿಕರ ಮನೆಯನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದಳು. ಈ ಬಾಡಿಗೆ ಮನೆಗೆ ಬಾಲಕನ ಕರೆದುಕೊಂಡು ಹೋಗಿದ್ದಾಳೆ. ಪ್ರೀತಿ ಹೆಸರಲ್ಲಿ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ.ಪೊಲೀಸರು ಮಹಿಳೆ ಪತ್ತೆ ಹಚ್ಚಿದ್ದಾರೆ. ವಿನೋಧಿನಿಯನ್ನು ಪೊಲೀಸರು ಅರೆಸ್ಟ್ ಮಾಡಿ ಬಾಲಕನ ರಕ್ಷಣೆ ಮಾಡಿದ್ದಾರೆ. ವಿನೋಧಿನಿ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ