- +91 73497 60202
- [email protected]
- January 6, 2025 3:36 PM
ಯಮುನಾ ನದಿಯಲ್ಲಿ ಡಾ.ಮನಮೋಹನ್ ಸಿಂಗ್ ಚಿತಾಭಸ್ಮ ವಿಸರ್ಜನೆ, ಈ ನಡುವೆ ಏನಿದು ವಿವಾದ..?
ನ್ಯೂಸ್ ನಾಟೌಟ್: ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಚಿತಾಭಸ್ಮವನ್ನು ಮಜ್ನು ಕಾ ತಿಲಾ ಗುರುದ್ವಾರ ಬಳಿಯ ಯಮುನಾ ನದಿಯಲ್ಲಿ ಸಿಖ್ ಸಂಪ್ರದಾಯದಂತೆ ಅವರ ಕುಟುಂಬ ಸದಸ್ಯರು ಭಾನುವಾರ(ಡಿ.29) ವಿಸರ್ಜಿಸಿದ್ದಾರೆ. ನಿಗಮಬೋಧ್ ಘಾಟ್ ನಿಂದ ನಿನ್ನೆ(ಡಿ.29) ಬೆಳಿಗ್ಗೆ ಚಿತಾಭಸ್ಮ ಸಂಗ್ರಹಿಸಿದ ನಂತರ ಗುರುದ್ವಾರ ಬಳಿಯ ಯಮುನಾ ನದಿಯ ದಡದಲ್ಲಿರುವ ‘ಅಷ್ಟ ಘಾಟ್’ ಗೆ ತೆಗೆದೊಯ್ದು, ಬಳಿಕ ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ. ಈ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತು ಅವರ ಮೂವರು ಪುತ್ರಿಯರಾದ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಮತ್ತು ಇತರ ಹತ್ತಿರದ ಸಂಬಂಧಿಕರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಚಿತಾಭಸ್ಮ ವಿಸರ್ಜನೆ ಸ್ಥಳದಲ್ಲಿ ಡಾ. ಮನಮೋಹನ್ ಸಿಂಗ್ ಕುಟುಂಬದವರೊಂದಿಗೆ ಯಾವುದೇ ಹಿರಿಯ ಕಾಂಗ್ರೆಸ್ ನಾಯಕರು ಅಥವಾ ಗಾಂಧಿ ಕುಟುಂಬದವರು ಕಂಡುಬಂದಿಲ್ಲ. ಜನವರಿ 3 ರಂದು ದಿವಂಗತ ಪ್ರಧಾನಿಯವರ ಅಧಿಕೃತ ನಿವಾಸ 3, ಮೋತಿಲಾಲ್ ನೆಹರು ಮಾರ್ಗದಲ್ಲಿ ‘ಅಖಂಡ ಪಥ’ ನಡೆಯಲಿದ್ದು, ಗುರುದ್ವಾರದಲ್ಲಿ ಭಾನುವಾರ ಕೆಲವು ಪ್ರಾರ್ಥನೆಗಳು ನಡೆದವು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ದಿವಂಗತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಕಾಂಗ್ರೆಸ್ ದೇಶಕ್ಕೆ ಮನಮೋಹನ್ ಸಿಂಗ್ ನೀಡಿರುವ ಸೇವೆ, ಅವರ ಸಮರ್ಪಣೆ ಮತ್ತು ಸರಳತೆಯನ್ನು ಯಾವಾಗಲೂ ಸ್ಮರಿಸುತ್ತೇವೆ ಎಂದು ಪೋಸ್ಟ್ ಮಾಡಲಾಗಿದೆ.ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಚಿತಾಭಸ್ಮವನ್ನು ಸಂಗ್ರಹಿಸಲು ಸಿಂಗ್ ಅವರ ಕುಟುಂಬದೊಂದಿಗೆ ಸ್ಮಶಾನ ಭೂಮಿಗೆ ಹೋಗದಿದ್ದಕ್ಕಾಗಿ, ಕಾಂಗ್ರೆಸ್ ನವರು ಬರಲಿಲ್ಲವೆಂದು ಕಾಂಗ್ರೆಸ್ ಮತ್ತು ಅದರ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಕಾಂಗ್ರೆಸ್ ಅಥವಾ ಗಾಂಧಿ ಕುಟುಂಬದ ಒಬ್ಬ ಸದಸ್ಯರೂ ಕೂಡಾ ಡಾ ಮನಮೋಹನ್ ಸಿಂಗ್ ಅವರ ಚಿತಾಭಸ್ಮ ಸಂಗ್ರಹಿಸಲು ಬರದಿದ್ದನ್ನು ನೋಡಲು ತುಂಬಾ ದುಃಖವಾಗಿದೆ. ಮಾಧ್ಯಮಗಳ ಗಮನ ಸೆಳೆಯಲು ರಾಜಕೀಯ ಮಾಡಲು, ಕಾಂಗ್ರೆಸ್ ಇರುತ್ತದೆ. ಆದರೆ ಅವರನ್ನು ಘನತೆಯಿಂದ ಗೌರವಿಸುವ ವಿಷಯ ಬಂದಾಗ ಅವರು ಗೈರುಹಾಜರಾಗಿದ್ದರು. ನಿಜಕ್ಕೂ ನಾಚಿಕೆಗೇಡು” ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಳವಿಯಾ ಫೋಸ್ಟ್ ಮಾಡಿದ್ದಾರೆ. ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಕಾಂಗ್ರೆಸ್ ನಾಯಕರ ಗೈರುಹಾಜರಿಯನ್ನು ಖಂಡಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ