ಅಕ್ಕ ಪಕ್ಕದ ಮನೆ ಮತ್ತು ದೇಗುಲಗಳಿಂದ ಬ್ರಾಂಡೆಡ್​ ಶೂ ಕದ್ದು ಮಾರುತ್ತಿದ್ದ ದಂಪತಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಅಕ್ಕ ಪಕ್ಕದ ಮನೆಗಳಿಂದ ಕದ್ದ ಶೂಗಳನ್ನು ಬಿಚ್ಚುತ್ತಿದ್ದಾಗ ಜೋಡಿಯೊಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್ ​ನಲ್ಲಿ ನಡೆದಿದೆ. ಈ ದಂಪತಿ ಸಮೀಪದ ಮನೆ ಹಾಗೂ ದೇವಾಲಯಗಳಿಂದ ಶೂ ಕದ್ದು ಸ್ಥಳೀಯ ಮಾರುಕಟ್ಟೆಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಮನೆಯಲ್ಲಿ ಶೂ ಕಳವಾಗುತ್ತಿದ್ದಂತೆ ಸ್ಥಳೀಯರು ದಂಪತಿಯ ಚಲನವಲನಗಳಿಂದ ಅನುಮಾನಗೊಂಡು ಮನೆಯಲ್ಲಿ ಶೋಧ ನಡೆಸಿದಾಗ ಅನೇಕ ಶೂಗಳು ಪತ್ತೆಯಾಗಿವೆ. ಕದ್ದ ಶೂಗಳನ್ನು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಡಿ. 13ರಂದು ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. Click