- +91 73497 60202
- [email protected]
- January 5, 2025 11:40 PM
ಉಡುಪಿ: ಸಮುದ್ರದ ಅಲೆಗೆ ಕೊಚ್ಚಿಹೋದ ಇಬ್ಬರು ಯುವಕರು..! ವಿಫಲವಾದ ಸ್ಥಳೀಯರ ಪ್ರಯತ್ನ..!
ನ್ಯೂಸ್ ನಾಟೌಟ್ : ಇಬ್ಬರು ಯುವಕರು ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಉಡುಪಿ, ಪಡುಬಿದ್ರಿಯ ಹೆಜಮಾಡಿ ಅಮಾಸಕರಿಯ ಬಳಿ ಇಂದು(ಡಿ.30) ನಡೆದಿದೆ. ಮೃತರನ್ನು ಅಮ್ಮಾನ್ (17), ಅಕ್ಷಯ್ (20) ಎಂದು ಗುರುತಿಸಲಾಗಿದೆ. ಇಂದು(ಸೋಮವಾರ) ಮಧ್ಯಾಹ್ನದ ವೇಳೆ ಸಮುದ್ರದ ಅಲೆಗೆ ಸಿಲುಕಿ ಯುವಕರು ಸಮುದ್ರ ಪಾಲಾಗಿದ್ದರು. ಕೂಡಲೇ ಅವರನ್ನು ಸ್ಥಳೀಯರು ಮೇಲೆಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾದರೂ, ಯುವಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅವರಿಬ್ಬರ ಜೊತೆಗಿದ್ದ ಇನ್ನೋರ್ವ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ