- +91 73497 60202
- [email protected]
- December 18, 2024 8:19 PM
ನ್ಯೂಸ್ ನಾಟೌಟ್ :ನಗರ ಭಾಗಗಳಲ್ಲಿ ಹೆಚ್ಚಿನವರು ಓಲಾ, ಉಬರ್ ಇತ್ಯಾದಿ ಕ್ಯಾಬ್ ಗಳನ್ನೇ ಅವಲಂಬಿಸಿರುತ್ತಾರೆ. ಮಹಿಳೆಯೊಬ್ಬರಿಗೆ ಉಬರ್ ಡ್ರೈವರ್ “ನಾನು ನಿಮ್ಮನ್ನು ಸಂತೋಷದಿಂದ ಅಪಹರಿಸುತ್ತೇನೆ ಎಂಬ ಸಂದೇಶ ಕಳುಹಿಸಿದ್ದಾನೆ”. ಈ ಮೆಸೇಜ್ ನೋಡಿ ಆ ಮಹಿಳೆ ಬೆಚ್ಚಿಬಿದ್ದಿದ್ದು, ತಮಗಾದ ಈ ಕಹಿ ಅನುಭವವನ್ನು ಅವರು ರೆಡ್ಡಿಡ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದೆಹಲಿಯ ಗುರುಗ್ರಾಮದ ನಿವಾಸಿಯೊಬ್ಬರು ಉಬರ್ ಡ್ರೈವರ್ ಕಳುಹಿಸಿದ ಆತಂಕಕಾರಿ ಸಂದೇಶವನ್ನು ಹಂಚಿಕೊಂಡಿದ್ದಾರೆ.ಈ ಘಟನೆ ಡಿಸೆಂಬರ್ 14 ರಂದು ನಡೆದಿದ್ದು, ಮಹಿಳೆಯೊಬ್ಬರು ಆನಂದ್ ವಿಹಾರ್ ಟರ್ಮಿನಲ್ ರೈಲು ನಿಲ್ದಾಣಕ್ಕೆ ಹೋಗಲು ಮುಂಜಾನೆ 4 ಗಂಟೆಯ ಸುಮಾರಿಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ನಂತರ ಮೊಬೈಲ್ ಅನ್ನು ಜೇಬಲ್ಲಿ ಇರಿಸಿ ತಮ್ಮ ಲಗೇಜ್ ಅನ್ನು ತರಲು ಹೋಗ್ತಾರೆ. ಬಳಿಕ ಒಮ್ಮೆ ಒಟಿಪಿಯನ್ನು ಪರೀಕ್ಷಿಸೋಣ ಎಂದು ಉಬರ್ ಚಾಟ್ ಅನ್ನು ತೆರೆದಾಗ ಡ್ರೈವರ್ ಕಳುಸಿದ್ದ ಸಂದೇಶವನ್ನು ಕಂಡು ಶಾಕ್ ಆಗಿದ್ದಾರೆ. ಉಬರ್ ಚಾಟ್ ಅನ್ನು ತೆರೆದಾಗ ʼಆನಂದ್ ವಿಹಾರ್ ಗಾ ಸರಿ, ನಾನು ನಿಮ್ಮನ್ನು ಬಹಳ ಸಂತೋಷದಿಂದ ಅಪಹರಿಸಿಕೊಂಡು ಹೋಗಬೇಕೆಂದಿದ್ದೇನೆʼ ಎಂದು ಡ್ರೈವರ್ ಕಳುಹಿಸಿದ್ದ ಸಂದೇಶ ಕಂಡಿದೆ. ಇದೇ ಭಯದಲ್ಲಿ ಕೊನೆಯ ಕ್ಷಣದಲ್ಲಿ ನಾನು ಕ್ಯಾಬ್ ಅನ್ನು ಕ್ಯಾನ್ಸಲ್ ಮಾಡಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಜೊತೆಗೆ ಉಬರ್ ಚಾಲಕನ ವಿವರಗಳ ಸಮೇತ ಈ ಬಗ್ಗೆ ಉಬರ್ ರೆಸ್ಪಾನ್ಸ್ ಟೀಮ್ ಗೆ ದೂರನ್ನು ನೀಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಉಬರ್ ಸಂಸ್ಥೆ ಭರವಸೆ ನೀಡಿದೆ. ಕೆಲವರ ಪ್ರಕಾರ ಆತನಿಗೆ ಇಂಗ್ಲಿಷ್ ಸರಿಯಾಗಿ ಬಾರದ ಕಾರಣ ಈ ರೀತಿ ಯಾರೋ ಹೇಳಿಕೊಟ್ಟಂತೆ ಬರೆದಿರಬಹುದು ಅಥವಾ ತಪ್ಪಾಗಿ ಗೂಗಲ್ ಭಾಷಾಂತರ ಮಾಡಿದ್ದನ್ನು ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ