- +91 73497 60202
- [email protected]
- December 4, 2024 11:48 PM
ನ್ಯೂಸ್ ನಾಟೌಟ್: ತಮಿಳುನಾಡಿನ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದ ಅರಣ್ಯ ಸಚಿವ ಪೊನ್ಮುಡಿ ಮೇಲೆ ಜನರು ಕೆಸರು ಎರಚಿ ಕಲ್ಲು ತೂರಿರುವ ಘಟನೆ ಇಂದು(ಡಿ.3) ನಡೆದಿದೆ. ತಮಿಳುನಾಡಿನ ಅರಣ್ಯ ಸಚಿವ ಪೊನ್ಮುಡಿ, ಅವರ ಪುತ್ರ ಗೌತಮ ಸಿಕಾಮಣಿ ಮತ್ತು ಜಿಲ್ಲಾಧಿಕಾರಿ ಪಳನಿ ಇರುವೆಲ್ಪಟ್ಟು, ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದರು. ಅತಿವೃಷ್ಟಿ ಸಮಸ್ಯೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಸಚಿವರು ಮತ್ತು ಅವರ ಪುತ್ರ ಹಾಗೂ ಜಿಲ್ಲಾಧಿಕಾರಿ ಮೇಲೆ ಕೆಸರು ಎರಚಿ ಸಾರ್ವಜನಿಕರು ಭಾರಿ ಗಲಾಟೆ ನಡೆಸಿದ್ದಾರೆ. ಇರುವೇಲ್ಪಟ್ಟು ಪ್ರದೇಶದ ತಿರುಚಿರಾಪಳ್ಳಿ-ಚೆನ್ನೈ ರಸ್ತೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅರಣ್ಯ ಸಚಿವ ಪೊನ್ಮುಡಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಸ್ಥಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸದೆ ತಮ್ಮ ವಾಹನದಲ್ಲೇ ಕುಳಿತು ಸಚಿವರು ಮಾತನಾಡಿಸಿದ್ದಕ್ಕೆ ಜನರು ಸಿಟ್ಟಿಗೆದ್ದರು. ಕೆಲವರು ಸಚಿವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಸರ್ಕಾರ ಕೇವಲ ಚೆನ್ನೈನತ್ತ ಗಮನಹರಿಸಿ ಇತರೆ ಜಿಲ್ಲೆಗಳನ್ನು ನಿರ್ಲಕ್ಷಿಸಿದೆ. ಹಲವು ಜಿಲ್ಲೆಗಳು ವ್ಯಾಪಕ ಹಾನಿ ಹಾಗೂ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ