ಟೇಕಾಫ್ ಆಗುವಾಗ ವಿಮಾನದಿಂದ ಕೆಳಗೆ ಬಿದ್ದ ಗಗನಸಖಿ..! ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ವಿಮಾನ ಟೇಕಾಫ್‌ ಆಗುವ ಸಂದರ್ಭದಲ್ಲಿ ಗಗನಸಖಿಯೊಬ್ಬರು ಕೆಳಗೆ ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಜೆ 4.30ರ ಸುಮಾರಿಗೆ ಲಂಡನ್ ನ ಈಸ್ಟ್ ಮಿಡ್‌ಲ್ಯಾಂಡ್ಸ್‌ ನಲ್ಲಿ ಈ ಘಟನೆ ನಡೆದಿದೆ. TUI ಏರ್‌ ವೇಸ್ ವಿಮಾನದ ಗಗನಸಖಿ ಬಿದ್ದು ಗಾಯಗೊಂಡಿದ್ದಾರೆ. ಬಿಬಿಸಿ ವರದಿ ಪ್ರಕಾರ, ಗಾಯಾಳು ಮಹಿಳೆಯನ್ನು ನಾಟಿಂಗ್‌ಹ್ಯಾಮ್‌ನಲ್ಲಿರುವ ಕ್ವೀನ್ಸ್ ಮೆಡಿಕಲ್ ಸೆಂಟರ್‌ ಗೆ ಏರ್‌ ಲಿಫ್ಟ್ ಮಾಡಲಾಯಿತು ಎಂದು ವರದಿಯಾಗಿದೆ. ಟಿಯುಐ ವಿಮಾನ ಟೇಕಾಫ್ ಆಗಲು ಸಿದ್ಧವಾಗಿತ್ತು. ವಿಮಾನಕ್ಕೆ ಜೋಡಿಸಲಾದ ಮೆಟ್ಟಿಲುಗಳನ್ನು ಅಲ್ಲಿಂದ ತೆಗೆಯಲಾಗಿತ್ತು. ಆದ್ರೆ ಸಿಬ್ಬಂದಿ ಇನ್ನು ಮೆಟ್ಟಿಲುಗಳಿವೆ ಎಂದು ತಿಳಿದು ಟೀಕ್ ಆಫ್ ಅಗುತ್ತಿದ್ದ ವೇಳೆ ವಿಮಾನದ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಮೆಟ್ಟಿಲು ತೆಗೆದಿರುವ ವಿಷಯ ತಿಳಿಯದ ಸಿಬ್ಬಂದಿ ಬಾಗಿಲು ತೆಗೆದು ಹೊರಗೆ ಬಂದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನ ನಿಲ್ದಾಣದಿಂದ ನಮಗೆ ಡಿಸೆಂಬರ್ 16ರಂದು ಸಂಜೆ 4.31ಕ್ಕೆ ನಮಗೆ ಕರೆ ಬಂದಿತ್ತು. ಕೂಡಲೇ ಸಿಂಗಲ್ ಚೇರ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ಅಂಬುಲೆನ್ಸ್ ಕಳುಹಿಸಲಾಯ್ತು. ನಂತರ ಅಲ್ಲಿಂದ ಓರ್ವ ಗಾಯಾಳುವನ್ನು ಕ್ವೀನ್ಸ್ ಮೆಡಿಕಲ್ ಸೆಂಟರ್‌ಗೆ ರವಾನಿಸಲಾಯ್ತು ಎಂದು ಇಎಂಎಸ್ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಮಾನದಿಂದ ಮಹಿಳೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ನಾವು ತನಿಖೆಗೆ ಸಂಪೂರ್ಣವಾಗಿ ಸ್ಪಂದಿಸುತ್ತೇವೆ. ಗಾಯಾಳು ಮಹಿಳಾ ಫ್ಲೈಟ್ ಅಟೆಂಡೆಂಟ್ ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸುತ್ತೇವೆ ಅಂತಾ ಇಎಂಎಸ್ ಕಾರ್ಯನಿರ್ವಾಹಕ ನಿರ್ದೇಶಕ ಸೈಮನ್ ಹಿಂಚ್ಲೆ ಹೇಳಿದ್ದಾರೆ.