ನ್ಯೂಸ್ ನಾಟೌಟ್: ಅಪರಿಚಿತ ವ್ಯಕ್ತಿಯೋರ್ವ ಬೆಳ್ಳಂಬೆಳಗ್ಗೆ ಕೃಷಿಕರೊಬ್ಬರ ತೋಟದಿಂದ ಅಡಿಕೆ ಕಳ್ಳತನ ಮಾಡಿ ಕಾಂಪೌಂಡ್ ಹಾರುವ ಸಮಯದಲ್ಲಿ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಇಂದು(ಡಿ.1) ಸುಳ್ಯದಲ್ಲಿ ನಡೆದಿದೆ.
ಈ ವ್ಯಕ್ತಿ ಅಡಿಕೆ ಮಾರಾಟಕ್ಕೆ ಬಂದರೆ, ಅಥವಾ ಇನ್ಯಾವುದೇ ವ್ಯವಹಾರಕ್ಕೆ ಮಾತನಾಡಿದರೆ, ಆತನ ಜೊತೆ ಯಾರೂ ಕೂಡ ಯಾವುದೇ ವ್ಯವಹಾರ ಮಾಡಬೇಡಿ ಎಂದು ಸುಳ್ಯದ ವರ್ತಕರೊಬ್ಬರು ಮನವಿ ಮಾಡಿದ್ದಾರೆ. ಈ ಬಗ್ಗೆ ಸುಳ್ಯ ಸುತ್ತ-ಮುತ್ತಲಿನ ಸಾರ್ವಜನಿಕರು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.