ಕಡಲ ತೀರದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ ನಟಿ ಸಮುದ್ರ ಪಾಲು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಮುದ್ರ ತೀರದಲ್ಲಿ ಎಷ್ಟು ಜೋಪಾನವಾಗಿದ್ದರೂ ಸಾಲದು, ರಷ್ಯಾ ಮೂಲದ ನಟಿಯೊಬ್ಬಳು ಸಮುದ್ರ ತಟದಲ್ಲಿರುವ ಬಂಡೆಯ ಮೇಲೆ ಕುಳಿತು ಧ್ಯಾನ ಮತ್ತು ಯೋಗಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಅಲೆಯೊಂದು ಅಪ್ಪಳಿಸಿದ್ದು, ಆ ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗಿ ನಟಿ ದುರಂತ ಅಂತ್ಯ ಕಂಡಿದ್ದಾಳೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದ್ದು, ನಟಿ ನೀರಲ್ಲಿ ಕೊಚ್ಚಿ ಹೋದ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ. ಈ ಆಘಾತಕಾರಿ ಘಟನೆ ಥಾಯ್ಲೆಂಡ್‌ ನ ಕೊಹ್‌ ಸಮುದ್ರ ತೀರದಲ್ಲಿ ನಡೆದಿದ್ದು, ಬಂಡೆಯ ಮೇಲೆ ಕುಳಿತು ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಅಲೆಯ ಹೊಡೆತಕ್ಕೆ ಸಿಲುಕಿ ರಷ್ಯಾ ಮೂಲದ ನಟಿಯೊಬ್ಬಳು ನೀರಲ್ಲಿ ಹೋಗಿದ್ದಾಳೆ. ರಷ್ಯಾದ ನೊವೊಬಿರ್ಸ್ಕ್‌ನ 24 ವರ್ಷ ನಟಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ತನ್ನ ಗೆಳೆಯನೊಂದಿಗೆ ಥಾಯ್ಲೆಂಡ್‌ಗೆ ಪ್ರವಾಸ ಬಂದಿದ್ದು, ನವೆಂಬರ್‌ 29 ರಂದು ಪ್ರಶಾಂತವಾದ ಕಡಲ ತೀರದಲ್ಲಿರುವ ಬಂಡೆಯ ಮೇಲೆ ಕುಳಿತು ಆಕೆ ಧ್ಯಾನ ಮತ್ತು ಯೋಗಾಭ್ಯಾಸ ಮಾಡುತ್ತಿದ್ದ ವೇಳೆ ಬಂಡೆಯ ಮೇಲೆ ಜೋರಾಗಿ ಅಲೆಯೊಂದು ಅಪ್ಪಳಿಸಿದೆ. ಆ ಅಲೆಯ ರಭಸಕ್ಕೆ ನಟಿ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಬಳಿಕ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಆಕೆಯನ್ನು ಹುಡುಕುವ ಪ್ರಯತ್ನವನ್ನು ಮಾಡಿದೆ. ಆಕೆಯ ದೇಹ ಇನ್ನೂ ದೊರಕಿಲ್ಲ ಎನ್ನಲಾಗಿದೆ. ಈ ಕುರಿತ ವಿಡಿಯೋವೊಂದು ನಿನ್ನೆ (ಡಿ.2) ದೊರಕಿದೆ. Click