ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ ನೀಡಿದ ಶಿಲ್ಪಾ ಶೆಟ್ಟಿ, ಆನೆಯನ್ನು ನೋಡಲು ಮುಗಿಬಿದ್ದ ಜನ

ನ್ಯೂಸ್ ನಾಟೌಟ್: ಬಾಲಿವುಡ್ ಸ್ಟಾರ್ ದಂಪತಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದ ಪಂಚಪೀಠಗಳಲ್ಲೇ ಮೊದಲ ಪೀಠವಾದ ರಂಭಾಪುರಿ ಮಠವು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿದೆ. ಈ ಮಠದ ಭಕ್ತರಾಗಿರುವ ಬಾಲವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಾಗ ಮಠಕ್ಕೆ ಬಂದು ಹೋಗುತ್ತಾರೆ. ಇದೀಗ ಒಂದು ಸಂಕಲ್ಪವನ್ನು ಮಾಡಿಕೊಂಡು ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನು ಇಂದು(ಡಿಸೆಂಬರ್ 15) ರಂಭಾಪುರಿ ಶ್ರೀ ಡಾ: ವೀರ ಸೋಮೇಶ್ವರ ಸ್ವಾಮೀಜಿ ಅನಾವರಣ ಮಾಡಿದರು.ಇದು ರೋಬೋಟಿಕ್ ಆನೆಯಾಗಿದ್ದು, ನೋಡುವುದಕ್ಕೆ ರಿಯಲ್ ಆನೆಯಂತೆಯೇ ಕಾಣಿಸುತ್ತದೆ. ಸದಾ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನ ಅಲುಗಾಡಿಸುತ್ತಿರುತ್ತದೆ. ನೋಡಲು ದೈತ್ಯ ಗಾತ್ರದಾಗಿದ್ದು, ಸದಾ ಆಕ್ಟೀವ್ ಆಗಿರುವ ಈ ಆನೆಯನ್ನು ನೋಡಿದವರಿಗೆ ಜೀವಂತ ಆನೆಯೇ ಇಲ್ಲಿ ನಿಂತುಕೊಂಡಿದೆ ಎಂಬಂತೆ ಭಾಸವಾಗಿತ್ತದೆ. ರಿಯಲ್​ ಆನೆ ನೀಡಲು ಕೆಲ ಕಾನೂನುಗಳು ಅಡ್ಡಿ ಇರುವುದರಿಂದ ಶಿಲ್ಪಾ ಶೆಟ್ಟಿ ಇದೀಗ ಒಂದು ಸಂಕಲ್ಪವನ್ನು ಮಾಡಿಕೊಂಡು ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. Click