ರೈಲಿನೊಳಗೆ ನಗ್ನವಾಗಿ ನುಗ್ಗಿದ ವ್ಯಕ್ತಿ..! ಗಾಬರಿಗೊಂಡು ಕಿರುಚಾಡಿದ ಮಹಿಳೆಯರು..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಇತ್ತೀಚೆಗೆ ಹುಡುಗಿಯರು ಅರೆಬರೆ ಬಟ್ಟೆ ತೊಟ್ಟು ರೈಲುಗಳಲ್ಲಿ ಹುಚ್ಚಾಟ ಪ್ರದರ್ಶಿಸಿ ವೈರಲ್ ಆದ ಬಗ್ಗೆ ಹಲವು ವರದಿಗಳಾಗಿದೆ. ಆದರೆ, ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ರೈಲಿನಲ್ಲಿ ಮಹಿಳೆಯರಿದ್ದ ಬೋಗಿಗೆ ನುಗ್ಗಿ ದುರ್ವರ್ತನೆ ತೋರಿದ್ದಾನೆ. ಸೋಮವಾರ (ಡಿ. 16) ಸಂಜೆ ಈ ಘಟನೆ ನಡೆದಿದ್ದು, ಕಲ್ಯಾಣ್‌ ನಿಂದ ಛತ್ರವತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ಗೆ ಪ್ರಯಾಣಿಸುತ್ತಿದ್ದ ಲೋಕಲ್‌ ಟ್ರೈನ್‌ ಘಾಟ್‌ಕೋಪರ್‌ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಂಪೂರ್ಣ ಬೆತ್ತಲಾಗಿದ್ದ ವ್ಯಕ್ತಿಯೊಬ್ಬ ರೈಲಿನ ಮಹಿಳಾ ಕೋಚ್‌ ಗೆ ನುಗ್ಗಿದ್ದಾನೆ. ಈತನನ್ನು ಕಂಡು ಮಹಿಳಾ ಪ್ರಯಾಣಿಕರು ಭಯದಿಂದ ಕಿರಿಚಾಡಿದ್ದು, ನಂತರ ಟಿಟಿಇ ಸ್ಥಳಕ್ಕಾಗಮಿಸಿ ಆತನನ್ನು ಬಾಗಿಲಿನಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಈ ಘಟನೆ ಮುಂಬೈನಲ್ಲಿ ನಡೆದಿದ್ದು, ನಗ್ನ ವ್ಯಕ್ತಿಯೊಬ್ಬ ರೈಲಿನಲ್ಲಿ ಮಹಿಳೆಯರಿದ್ದ ಭೋಗಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾನೆ. Click