ನ್ಯೂಸ್ ನಾಟೌಟ್: ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ನ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡಿನ ದಾಳಿ ನಡೆದಿದೆ.
ಬಾದಲ್ ಶಿರೋಮಣಿ ಅಕಾಲಿ ದಳದ ನಾಯಕನಾಗಿದ್ದು, ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಧಾರ್ಮಿಕ ಶಿಕ್ಷೆಯ ಭಾಗವಾಗಿ ಗೋಲ್ಡನ್ ಟೆಂಪಲ್ ನ ಪ್ರವೇಶದ್ವಾರದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಡಿ.04) ಬೆಳಿಗ್ಗೆ ತಪಸ್ಸಿಗೆ ಕುಳಿತಾಗ ಗುಂಡಿನ ದಾಳಿ ಮೂಲಕ ಕೊಲೆಗೆ ಯತ್ನಿಸಲಾಗಿದೆ. ಆರೋಪಿಯನ್ನು ಅಮೃತಸರದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಗುರುದಾಸ್ ಪುರ ಜಿಲ್ಲೆಯ ದಾಲ್ ಖಾಲ್ಸಾದ ನರೇನ್ ಸಿಂಗ್ ಚೋರ್ಹಾ ಎಂದು ಗುರುತಿಸಲಾಗಿದ್ದು, ಗುಂಡು ಹಾರಿಸಿದಾಗ ಅಲ್ಲಿನ ಜನರು ಆತನ ಮೇಲೆ ಹಲ್ಲೆ ನಡೆಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾದಲ್ ಅವರು 2007 ರಿಂದ 2017 ರವರೆಗೆ ಪಂಜಾಬ್ ನ ಉಪಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ಬಾದಲ್ ಗೆ ಹಾಗೂ ಅಕಾಲಿದಳದ ಇನ್ನಿತರ ನಾಯಕರಿಗೆ ತಂಖಾ’ (ಧಾರ್ಮಿಕ ಶಿಕ್ಷೆ) ಘೋಷಿಸಲಾಗಿತ್ತು.
ಕಳೆದ ಎರಡು ದಿನಗಳಿಂದ ಬಾದಲ್ ಒಂದು ಕೈಯಲ್ಲಿ ಈಟಿ ಹಿಡಿದು, ನೀಲಿ ಸೇವಾದರ್’ ಸಮವಸ್ತ್ರವನ್ನು ಧರಿಸಿ ಗೋಲ್ಡನ್ ಟೆಂಪಲ್ನ ಗೇಟ್ ಬಳಿ ವ್ಹೀಲ್ ಚೇರ್ನಲ್ಲಿ ಕುಳಿತಿದ್ದರು. ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರ ನಿಧಾನವಾಗಿ ಗೇಟ್ ಬಳಿ ಬಂದು ಬಂದೂಕನ್ನು ಹೊರತೆಗೆಯುತ್ತಾನೆ. ಬಳಿಕ ಗುಂಡಿನ ದಾಳಿ ನಡೆಸಿರುವುದು ಸೆರೆಯಾಗಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click here to follow us on Facebook
Click