ನಂದಿನಿ ಹಾಲಿನ ದರ ಮತ್ತೆ 5 ರೂ. ಏರಿಕೆ ಮಾಡಲು ತೀರ್ಮಾನ..? ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ..!

ನ್ಯೂಸ್ ನಾಟೌಟ್ : ಅತೀ ಶೀಘ್ರದಲ್ಲೇ ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲಿನ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್​ ಹಾಲಿನ ದರದಲ್ಲಿ 5 ರೂ. ಏರಿಕೆ ಮಾಡುವಂತೆ ಬುಧವಾರ(ಡಿ.25) ನಡೆದ ಹಾಲು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಕೆಎಂಎಫ್​​ ಈ ಹಿಂದೆ ಪ್ರತಿ ಲೀಟರ್​ನಲ್ಲಿ​ ಹೆಚ್ಚುವರಿಯಾಗಿ 50 ಎಂಎಲ್​​ ನೀಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದರಿಂದ ಅರ್ಧ ಲೀಟರ್ ಹಾಲಿನ ಪ್ಯಾಕೆಟ್​ ದರ 22ರಿಂದ 24 ರೂ.ಗೆ ಏರಿಕೆಯಾಗಿತ್ತು. ಒಂದು ಲೀಟರ್​ ಹಾಲಿನ ದರ ಏರಿಕೆ 42 ರಿಂದ 44 ರೂ.ಗೆ ಏರಿಕೆಯಾಗಿತ್ತು. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಿರಲಿಲ್ಲ. ಈಗ ಮತ್ತೆ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಂದಿನಿ ಇದೀಗ ಹೊಸ ಪ್ರಾಡಕ್ಟ್‌ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಷ್ಟು ದಿನಗಳ ಕಾಲ ನಂದಿನಿ ಪ್ರಾಡೆಕ್ಟ್ ​​ನ ತುಪ್ಪ, ಬೆಣ್ಣೆ, ಪೇಡಾ, ಮೈಸೂರು ಪಾಕ್, ಬ್ರೆಡ್‌, ಬನ್ ಸೇರಿದಂತೆ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದವು. ಇದೀಗ, ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಕೂಡ ಗ್ರಾಹಕರಿಗೆ ಸಿಗುತ್ತಿದೆ. Click