ನ್ಯೂಸ್ ನಾಟೌಟ್: ಕೌಟುಂಬಿಕ ಕಲಹದಿಂದಾಗಿ ಇಬ್ಬರು ಮಕ್ಕಳನ್ನು ಕೊಲೆಗೈದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಡಿ.11ರಂದು ನಡೆದಿದೆ.
ಮೃತ ತಾಯಿಯನ್ನು 35 ವರ್ಷದ ಕುಸುಮಾ ಹಾಗೂ ಮಕ್ಕಳಾದ ಶ್ರೀಯಾನ್ (6), ಚಾರ್ವಿ (1.5) ಎಂದು ಗುರುತಿಸಲಾಗಿದೆ.
ಕೊಡಿಗೇಹಳ್ಳಿಯ ಅಪಾರ್ಟ್ಮೆಂಟ್ ವೊಂದರಲ್ಲಿ ದಂಪತಿ ಸುರೇಶ್ ಮತ್ತು ಕುಸುಮಾ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನಮ್ಮ ಸಾವಿಗೆ ನಾವೇ ಕಾರಣವೆಂದು ಬರೆದಿದ್ದಾಳೆ. ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click