ನ್ಯೂಸ್ ನಾಟೌಟ್: ಹೆಚ್ಚು ವಯಸ್ಸಿನ ಅಂತರವಿರುವ ವ್ಯಕ್ತಿಯನ್ನು ಮದುವೆಯಾಗುವ ಉದಾಹರಣೆಗಳನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಜಾಗದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನೆ ಮದುವೆಯಾದ ಘಟನೆ ನಡೆದಿದೆ.
ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು 16 ವರ್ಷದ ಯುವಕನ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದಳು. ಕೆಲವೇ ದಿನದಲ್ಲಿ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಆ 25 ವರ್ಷದ ಮಹಿಳೆ, ಹುಡುಗನ ಮನೆಯವರಿಗೆ ತಿಳಿಯದಂತೆ ಆತನನ್ನು ಮದುವೆಯಾಗಿದ್ದಾಳೆ, ಸದ್ಯ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟು ಹಾಕಿದೆ.
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ 25 ವರ್ಷದ ಯುವತಿ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣದ ಮೂಲಕ ಈಕೆಗೆ 16 ವರ್ಷದ ಯುವಕನಾದ ಮೀರತ್ ನ ಪರಿಚಯವಾಗಿತ್ತು. ಈ ಜೋಡಿ ಪರಿಚಯ ಪ್ರೀತಿಗೆ ತಿರುಗಿತ್ತು, ಇಬ್ಬರು ಕೂಡ ಮೊಬೈಲ್ ಪೋನ್ ಮೂಲಕ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಇತ್ತೀಚೆಗೆ ಮೀರತ್ ಎಂಬ ಹುಡುಗನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕಿ, ಹುಡುಗ ಮೇಜರ್ ಎಂದು ರೂಪಿಸಲು, ನಕಲಿ ದಾಖಲೆಗಳನ್ನು ಮಾಡಿಸಿಕೊಂಡು, ಕದ್ದು ಮುಚ್ಚಿ ಮದುವೆಯಾಗಿಸಿದ್ದಾಳೆ.
ಇವರಿಬ್ಬರು ಕದ್ದು ಮುಚ್ಚಿ ಮದುವೆಯಾಗಿದ್ದ ವಿಚಾರ, ಹುಡುಗನ ಪೋಷಕರಿಗೆ ಗೊತ್ತಾಗುತ್ತಿದ್ದಂತೆ, ಪೋಷಕರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ಈ ವಿಷಯದ ಕುರಿತು ಸದ್ಯ ವಿಚಾರಣೆ ಮಾಡುತ್ತಿದ್ದು, ಪ್ರಕರಣ ದಾಖಲಾಗಿದೆ.
Click