ನ್ಯೂಸ್ ನಾಟೌಟ್: ಸುಳ್ಯ ಬಸ್ ನಿಲ್ದಾಣದ ಬಳಿ ಅಪಘಾತದಲ್ಲಿ ಗಾಯಗೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ರಕ್ಷಾ ಸಮಿತಿ ಸದಸ್ಯ ಪ್ರಗತಿ ಆಂಬ್ಯುಲೆನ್ಸ್ ನ ಅಚ್ಚು, ಎಸ್ ಎಸ್ ಎಫ್ ಆಂಬ್ಯುಲೆನ್ಸ್ ಚಾಲಕ ಸಿದ್ಧೀಕ್, ಮೀಫ್ ಉಪಾಧ್ಯಕ್ಷ ಕೆಎಂ ಮುಸ್ತಫಾ, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ ಕರುಣಾಕರ ಹಾಗೂ ಸಿಬ್ಬಂದಿ ಅನಾಥ ವ್ಯಕ್ತಿಯ ಚಿಕಿತ್ಸೆಗೆ ಮಂಗಳೂರಿನಲ್ಲಿ ವ್ಯವಸ್ಥೆ ಮಾಡಿ ನೆರವಾದರು.