ರೈಲಿನಿಂದ ಬಿದ್ದು ಬಿಳಿನೆಲೆಯ ವ್ಯಕ್ತಿ ಫರಂಗಿಪೇಟೆಯಲ್ಲಿ ಸಾವು..! ಬ್ಯಾಗ್ ನೊಳಗಿತ್ತು ಮ್ಯಾರೇಜ್ ಸರ್ಟಿಫಿಕೇಟ್

ನ್ಯೂಸ್ ನಾಟೌಟ್ : ಫರಂಗಿಪೇಟೆಯ ನೆತ್ತೆರ್ ಕೆರೆ ಎಂಬಲ್ಲಿ ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇದೀಗ(ಡಿ.17) ನಡೆದಿದೆ. ಸ್ಥಳೀಯರು ಯುವಕನ ದೇಹವನ್ನು ಕಂಡು ವಿಷಯ ತಿಳಿಸಿದ್ದು, ಆತನ ಬ್ಯಾಗ್ ನೊಳಗೆ ದಾಖಲೆಗಳು ದೊರಕಿದೆ. ಆದಾರ್ ಕಾರ್ಡ್ ಪ್ರಕಾರ ಸುಬ್ರಹ್ಮಣ್ಯದ ಬಿಳಿನೆಲೆಯ ಶಶಿಕುಮಾರ್ ಎನ್ನಲಾಗಿದೆ. ಗುರುತು ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ತಿಳಿಸಲಾಗಿದೆ.