ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ನಿದ್ರೆಯಲ್ಲಿ ಹಲ್ಲಿನ ಸೆಟ್ ನುಂಗಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆದರೆ ಈ ವ್ಯಕ್ತಿ ಹಲ್ಲಿನ ಸೆಟ್ ಹುಡುಕಿದ್ದಾರೆ ಆದರೆ ಅದನ್ನು ತಾನು ನಿದ್ದೆಯಲ್ಲಿ ನುಂಗಿರುವ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಹಲ್ಲಿನ ಸೆಟ್ ಶ್ವಾಸಕೋಶದಲ್ಲಿ ಸಿಲುಕಿತ್ತು. ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಯ ವೈದ್ಯರು ಇದೀಗ ಡೆಂಟಲ್ ಸೆಟ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ ಎನ್ನಲಾಗಿದೆ.
52 ವರ್ಷದ ವ್ಯಕ್ತಿ ಹಲವು ವರ್ಷಗಳಿಂದ ಹಲ್ಲು ಸೆಟ್ ಬಳಸುತ್ತಿದ್ದರು, ಆದರೆ ಕಾಲಾ ನಂತರದಲ್ಲಿ ಅದು ಸಡಿಲವಾಗಿತ್ತು.
ಮಲಗಿದ್ದಾಗ ಅಜಾಗರೂಕತೆಯಿಂದ ನುಂಗಿ ಹೋಗಿದೆ. ಹಲ್ಲಿನ ಸೆಟ್ ನಿದ್ದೆಯಲ್ಲಿ ನುಂಗಿದ ಪರಿಣಾಮ ಶ್ವಾಸಕೋಶದ ಬಲಭಾಗದಲ್ಲಿ ಸಿಲುಕಿತ್ತು. ಉಸಿರಾಟಕ್ಕೆ ತೊಂದರೆಯಾಗಿ ಅಥವಾ ಶ್ವಾಸಕೋಶಕ್ಕೆ ಗಾಯಗಳಾಗಿ ಪ್ರಾಣಕ್ಕೆ ಅಪಾಯಬರುವ ಸಾಧ್ಯತೆಗಳಿತ್ತು ಆದರೆ, ಸೂಕ್ತ ಸಮಯದ ಶಸ್ತ್ರ ಚಿಕಿತ್ಸೆಯಿಂದ ಅಪಾಯ ತಪ್ಪಿದೆ.
ವೈದ್ಯಕೀಯ ತಂಡವು ವಸ್ತುವನ್ನು ತೆಗೆದುಹಾಕಲು ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಕಠಿಣವಾದ ಬ್ರಾಂಕೋಸ್ಕೋಪಿ ವಿಧಾನವನ್ನು ಆರಿಸಿಕೊಂಡಿತ್ತು. ಯಶಸ್ವಿಯಾಗಿ ಆಪರೇಷನ್ ಮುಗಿಸಿದ್ದಾರೆ.
ಹಲ್ಲಿನ ಸೆಟ್ ನ ಎರಡೂ ಬದಿಗಳಲ್ಲಿ ಲೋಹವಿದ್ದರೆ ಗಾಯವಾಗುವ ಅಪಾಯ ಹೆಚ್ಚಿತ್ತು, ರಕ್ತಸ್ರಾವಕ್ಕೆ ಕಾರಣವಾಗಬಹುದಿತ್ತು, ಅದೃಷ್ಟವಶಾತ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Click