ನ್ಯೂಸ್ ನಾಟೌಟ್ : ಕೆವಿಜಿ ಸಮಾಜ ಸೇವಾ ಸಂಘ (ರಿ.) ಸುಳ್ಯ ವತಿಯಿಂದ ಡಾ.ಕೆವಿಜಿ ಯವರ 96ನೇ ಜಯಂತ್ಯೋತ್ಸವ ಡಿ. 26ರಂದು ಸುಳ್ಯ ಹಬ್ಬ ಕಚೇರಿಯಲ್ಲಿ ಆಚರಿಸಲಾಯಿತು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ ಇದರ ಗೌರವಾಧ್ಯಕ್ಷರು ಹಾಗೂ A. O. l. E(R.) ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಗಣ್ಯರು ಕೆವಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಡಾ ಎನ್ ಎ ಜ್ಞಾನೇಶ್ ವಹಿಸಿದ್ದರು. ಕೃಷಿ ಕೆಲಸಗಳಲ್ಲಿ ಅಪಘಾತಗೊಂಡು ದೈಹಿಕ ಶಕ್ತಿಯನ್ನು ಕಳೆದುಕೊಂಡ ಇಬ್ಬರು ಯುವಕರ ಮನೆಯವರಿಗೆ ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ಸಹಾಯ ದನ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಕೆವಿಜಿಯವರು ತಮ್ಮ ಸಮಾಜಮುಖಿ ಕೆಲಸ ಕಾರ್ಯಗಳಿಂದ ಪ್ರಾತಃಕಾಲ ಸ್ಮರಣೀಯರು ಎಂದು ಹೇಳಿದರು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ಜಯಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿ ಕೆ ರಾಜು ಪಂಡಿತ್, ಸಂಚಾಲಕರಾದ ಆನಂದ ಖಂಡಿಗ, ಕೋಶಧಿಕಾರಿ ಶ್ರೀ ಕೃಷ್ಣ ಎಂ. ಎನ್, A. O. L. E(R.) ಕಾರ್ಯದರ್ಶಿ ಕೆ ವಿ ಹೇಮಾನಾಥ್,ಅಡ್ವೈಸರ್ ಪ್ರೊ. ದಾಮೋದರ ಗೌಡ, ಸದಸ್ಯರಾದ ಜಗದೀಶ್ ಎ.ಹೆಚ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಡಾ ಲೀಲಾಧರ್ ಡಿ.ವಿ, ಕೆವಿಜಿ ಸಮಾಜಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ದೊಡ್ಡಣ್ಣ ಬರಮೇಲ, ಚಂದ್ರಶೇಖರ್ ಪೆರಾಲು, ಸನ್ಮಾನ ಸಮಿತಿ ಸಂಚಾಲಕರಾದ ಕೆ.ಟಿ ವಿಶ್ವನಾಥ, ಪಂಚಾಯತ್ ಮುಖ್ಯಧಿಕಾರಿ ಸುಧಾಕರ್ ರೈ,ನಗರಪಂಚಾಯತ್ ಅಧ್ಯಕ್ಷೆ ಶಶಿಕಲಾ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.