ನ್ಯೂಸ್ ನಾಟೌಟ್: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ಪ್ರಜೆಗಳ ಅಂಕಿ ಅಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಜನ ಪಾಕಿಸ್ತಾನ ಮತ್ತು 159 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೇ 115 ಜನ ಬಾಂಗ್ಲಾದೇಶಿಗರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಡಿ.ಎಸ್ ಅರುಣ್ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಜನ ಪಾಕಿಸ್ತಾನ, 159 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೇ 115 ಜನ ಬಾಂಗ್ಲಾದೇಶಿಯರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ.
ಅದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ. ಅಕ್ರಮವಾಗಿ ಬರೋದು ಇದೇನೂ ಹೊಸದಲ್ಲ ಲಕ್ಷಾಂತರ ಜನ ಭಾರತಕ್ಕೆ ಬರ್ತಿದ್ದಾರೆ. ಅವರನ್ನ ತಡೆಗಟ್ಟುವ ಕೆಲಸ ಸೈನಿಕರು ಗಡಿಯಲ್ಲಿ ನ ಮಾಡ್ತಿದ್ದಾರೆ. ಆದರೂ ನುಸುಳಿಕೊಂಡು ಹೇಗೆ ಭಾರತಕ್ಕೆ ಬರ್ತಾರೆ ಅನ್ನೋದು ಪ್ರಶ್ನೆಯಾಗಿದೆ. ಇದನ್ನ ತಡೆಗಟ್ಟುವ ಕೆಲಸ ಪ್ರತಿ ವರ್ಷ ನಾವು ಇದರ ಪರಿಶೀಲನೆ ಮಾಡ್ತೀವಿ. ಅಕ್ರಮವಾಗಿ ಇರೋರನ್ನ ಗಡಿಪಾರು ಮಾಡೋ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು.
ಇನ್ನೂ ಆಫ್ರಿಕಾದಿಂದ ಬಂದು ಡ್ರಗ್ಸ್ ಮಾರಾಟ ಮಾಡೋ ಕೆಲಸ ಆಗ್ತಿದೆ. ಸ್ಟೂಡೆಂಟ್ ವೀಸಾದಲ್ಲಿ ಬಂದು ಡ್ರಗ್ ದಂಧೆ ಮಾಡ್ತಾರೆ. ಈ ರೀತಿ ಅಕ್ರಮವಾಗಿ ಬಂದು ನೆಲೆಸಿರುವವರ ಪತ್ತೆಗೆ ಪ್ರತಿ ಜಿಲ್ಲೆಯಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ನಿರಂತರವಾಗಿ ಅನಧಿಕೃತವಾಗಿ ಬಂದಿರುವ ವಿದೇಶಿ ಪ್ರಜೆಗಳನ್ನ ಪತ್ತೆಹಚ್ಚುವ ಕೆಲಸ ಮಾಡ್ತಿದ್ದೇವೆ ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
Click