ಹೆಂಡತಿಗೆ ಕರಿಮಣಿ ಕೊಡಿಸಲು ATMನಿಂದ ಕಳ್ಳತನ..! ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ‌ವನಿಂದಲೇ ಕೃತ್ಯ..!

ನ್ಯೂಸ್ ನಾಟೌಟ್: ಹೆಂಡತಿಗೆ ಮಂಗಳಸೂತ್ರ ಕೊಡಿಸಲು ಎಟಿಎಂಗೆ ಕನ್ನ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ನಗರದ ಕೃಷ್ಣಾ ಸುರೇಶ್ ದೇಸಾಯಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಹೆಚ್‌.ಡಿ.ಎಫ್‌.ಸಿ ಬ್ಯಾಂಕ್ ಎಟಿಎಂನಲ್ಲಿ ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದ ಎಂದು ವರದಿ ತಿಳಿಸಿದೆ. ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ‌. ಎಟಿಎಂ ಮಷಿನ್ ಕೀ ಆತನ ಬಳಿಯೇ ಇರುತ್ತಿತ್ತು. ಟೀಂ ಜೊತೆಗೆ ಬಂದು ಹಣ ಹಾಕಿ ಬಳಿಕ ಸಂಜೆ ಒಬ್ಬನೇ ಬಂದು ಕಳ್ಳತನ ಮಾಡಿದ್ದಾನೆ. ಹಣ ಹಾಕಲು ಇರುತ್ತಿದ್ದ ಎಟಿಎಂ ಮಷಿನ್ ಕೀ ಬಳಸಿಯೇ ಎಂಟು ಲಕ್ಷ ಹಣ ಕಳ್ಳತನ ಮಾಡಿದ್ದಾನೆ. ಎರಡು ದಿನದ ಬಳಿಕ ಈತನ ಕೃತ್ಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಎಟಿಎಂನಿಂದ ತಮ್ಮ‌ ಸಿಬ್ಬಂದಿ ಹಣ ಕದ್ದಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ ಒಂದು ಮಂಗಳಸೂತ್ರ, ಚಿನ್ನದ ಸರ, ಏಳು ಲಕ್ಷ ರೂ. ‌ನಗದು ಜಪ್ತಿ ಮಾಡಲಾಗಿದೆ. Click