- +91 73497 60202
- [email protected]
- January 8, 2025 3:02 PM
ಕತ್ತರಿಸಿದ ಮೂಗನ್ನು ಬ್ಯಾಗ್ ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಓಡಿ ಬಂದ ಮಹಿಳೆ..! ಜಮೀನು ವಿಚಾರಕ್ಕೆ ಹೊಡೆದಾಟ..!
ನ್ಯೂಸ್ ನಾಟೌಟ್: ಮಹಿಳೆಯೊಬ್ಬಳು ತನ್ನ ಕತ್ತರಿಸಿದ ಮೂಗನ್ನು ಬ್ಯಾಗ್ ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು, ಜಲೋರ್ ನ ಸೈಲಾ ಮೂಲದ ಕುಕಿ ದೇವಿ ಎಂಬಾಕೆ ಪಾಲಿಯಲ್ಲಿರುವ ಆಸ್ಪತ್ರೆಗೆ ಓಡಿ ಬಂದಿದ್ದಾರೆ, ಜತೆಗೆ ಕತ್ತರಿಸಿದ ಮೂಗನ್ನು ಬ್ಯಾಗ್ನಲ್ಲಿಟ್ಟುಕೊಂಡು ಬಂದಿದ್ದರು. ಕುಕಿ ದೇವಿ ಕೆಲವು ದಿನಗಳಿಂದ ಸೈಲಾ ಗ್ರಾಮದ ಮೋಕ್ನಿ ಎಂಬಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು, ಆಕೆಯ ಸಂಬಂಧಿಗಳ ನಡುವೆ ಜಮೀನಿನ ವಿಷಯದಲ್ಲಿ ಮನಸ್ತಾಪವಿತ್ತು. ಮಂಗಳವಾರ ಓಂ ಪ್ರಕಾಶ್ ಎಂಬುವವರು ಹಾಗೂ ಇತರರು ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ, ಚಾಕುವಿನಿಂದ ಆಕೆಯ ಮೂಗನ್ನು ಕತ್ತರಿಸಿದ್ದಾರೆ. ಆಕೆ ಕೂಡಲೇ ತುಂಡರಿಸಿದ ಮೂಗನ್ನು ಬ್ಯಾಗ್ ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಕುಕಿ ದೇವಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೋಧ್ ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರ್ ಆಸ್ಪತ್ರೆಯ ಡಾ.ಜುಗಲ್ ಮಹೇಶ್ವರಿ ಅವರ ಮೂಗು ತೀವ್ರವಾಗಿ ಕತ್ತರಿಸಲ್ಪಟ್ಟಿದೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರ ಅದನ್ನು ಮರು ಜೋಡಿಸಬಹುದು ವೈದ್ಯರು ಹೇಳಿದ್ದಾರೆ. ಮಾಹಿತಿ ಪ್ರಕಾರ ಸಂತ್ರಸ್ತೆ ಕುಕಿ ದೇವಿ ತನ್ನ ಸಹೋದರ ರಮೇಶ್ ಜತೆ ಜಮೀನು ವಿವಾದ ಬಗೆಹರಿಸಲು ಮೊಕನಿ ಗ್ರಾಮಕ್ಕೆ ತೆರಳಿದ್ದರು. ಘಟನೆ ನಡೆದ ತಕ್ಷಣ ಸೈಲಾ ಪೊಲೀಸರು ಕ್ರಮ ಕೈಗೊಂಡು ಪ್ರಮುಖ ಆರೋಪಿ ಓಂಪ್ರಕಾಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ