- +91 73497 60202
- [email protected]
- December 5, 2024 12:25 AM
ನ್ಯೂಸ್ ನಾಟೌಟ್:ದೇಶಾದ್ಯಂತ ವಕ್ಫ್ ಮಸೂದೆ ಮತ್ತು ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದಗಳ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ಆಂಧ್ರ ಪ್ರದೇಶ ಸರ್ಕಾರ ವಕ್ಫ್ ಮಂಡಳಿಯನ್ನೇ ವಜಾಗೊಳಿಸಿ ಆದೇಶ ಹೊರಡಿಸಿದೆ. ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ.ಎಸ್.ಆರ್.ಸಿ.ಪಿ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ಅನ್ನು ಆಂಧ್ರ ಪ್ರದೇಶ ಸರ್ಕಾರ ವಿಸರ್ಜಿಸಿದೆ. ಈ ಕುರಿತು ಶನಿವಾರ(ನ.30) ಆದೇಶ ಹೊರಡಿಸಲಾಗಿದೆ ಎಂದು ಆಂಧ್ರದ ರಾಜ್ಯ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎಂ.ಡಿ.ಫಾರೂಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ 21 ರಂದು ಹಿಂದಿನ ಸರ್ಕಾರವು ಮಂಡಳಿಯ ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ನಂತರ ವಕ್ಫ್ ಮಂಡಳಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೈಕೋರ್ಟ್ ಮಧ್ಯಂತರ ಆದೇಶಗಳನ್ನು ನೀಡಿದೆ ಎಂದು ಸಚಿವ ಎನ್.ಎಂ.ಡಿ.ಫಾರೂಕ್ ಸ್ಪಷ್ಟಪಡಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ