ನ್ಯೂಸ್ ನಾಟೌಟ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತ ಭೇಟಿಗೆ ತಯಾರಿ ನಡೆಯುತ್ತಿದೆ ಎಂದು ಕ್ರೆಮ್ಲಿನ್ ಸೋಮವಾರ(ಡಿ.2) ಹೇಳಿದೆ. ಆದರೆ ನಿಖರ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿಯ ಆಹ್ವಾನದ ಮೇರೆಗೆ ಪುಟಿನ್ 2025ಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ರಷ್ಯಾ ಉಕ್ರೇನ್ ಯುದ್ಧದ ಬಳಿಕ ಅಮೆರಿಕಾ ಸೇರಿದಂತೆ ಹಲವು ದೇಶಗಳು ರಷ್ಯಾ ಅಧ್ಯಕ್ಷರ ಅಂತರಾಷ್ಟೀಯ ಪ್ರಯಾಣಗಳನ್ನು ಮತ್ತು ವ್ಯವಹಾರಗಳ ಮೇಲೆ ನಿರ್ಬಂಧ ವಿಧಿಸಿವೆ. ಈ ನಡುವೆಯೂ ಭಾರತ ಅಪಾರ ಪ್ರಮಾಣದ ಅನಿಲ, ಪೆಟ್ರೋಲಿಯಂ ಮತ್ತು ಯುದ್ಧೋಪಕರಣಗಳ ಆಮದು ವ್ಯವಹಾರ ಮಾಡಿದೆ. ರಷ್ಯಾಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯುದ್ಧದ ಬಳಿಕವೂ ಭೇಟಿ ನೀಡಿದ್ದರು.
Click