ನ್ಯೂಸ್ ನಾಟೌಟ್ : ಸಂಸತ್ತಿನ ಬಳಿ ಆತ್ಮಹತೆಗೆ ಯತ್ನಿಸಿದ್ದ 26 ವರ್ಷದ ಜಿತೇಂದ್ರ ಎಂಬ ವ್ಯಕ್ತಿ ಶುಕ್ರವಾರ(ಡಿ.27) ಆರ್ ಎಂ ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಡಿಸೆಂಬರ್ 25 ರಂದು ನೂತನ ಸಂಸತ್ ಭವನದ ಬಳಿ ಪೆಟ್ರೋಲ್ ರೀತಿಯ ದ್ರವವನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿತ್ತು.
ಸಂಸತ್ತಿನ ಬಳಿಯಿದ್ದ ಭದ್ರತಾ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಗಾಯಾಳುವನ್ನು ಚಿಕಿತ್ಸೆಗಾಗಿ ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಿದ್ದರು.
ಕೌಟುಂಬಿಕ ಕಲಹವೇ ಆತ್ಮಹತೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಉತ್ತರ ಪ್ರದೇಶದ ಬಾಗ್ ಪತ್ ನಲ್ಲಿ ನಡೆಯುತ್ತಿರುವ ವಿವಾದದಿಂದ (ಬೀದಿ ಹೊಡೆದಾಟ) ಬೇಸತ್ತು, ಮೃತಪಟ್ಟ ಜಿತೇಂದ್ರ ಆತ್ಮಹತೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿತೇಂದ್ರ ಅವರಿಗೆ ಶೇ. 95ರಷ್ಟು ಸುಟ್ಟ ಗಾಯಗಳಾಗಿದ್ದು, ಶುಕ್ರವಾರ ಬೆಳಗಿನ ಜಾವ 2:23ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
Click