ನ್ಯೂಸ್ ನಾಟೌಟ್: ನಿಯಂತ್ರಣ ತಪ್ಪಿ ಬಸ್ಸೊಂದು ನಿಲ್ದಾಣದಲ್ಲಿ ಕುಳಿತಿದ್ದ ಆ ಯುವಕನ ಮೇಲೆಯೇ ನುಗ್ಗಿದ್ದು, ಈ ಭೀಕರ ಅಪಘಾತದಲ್ಲಿ ಯುವಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಈ ಘಟನೆ ಡಿಸೆಂಬರ್ 1 ಭಾನುವಾರದಂದು ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಯುವಕನೊಬ್ಬ ಭೀಕರ ಅಪಘಾತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಈ ಯುವಕ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ಬಸ್ಸೊಂದು ಆತನ ಮೇಲೆಯೇ ನುಗ್ಗಿದೆ.
ಈ ಘಟನೆ ಡಿಸೆಂಬರ್ 1 ಭಾನುವಾರದಂದು ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಯುವಕನೊಬ್ಬ ಭೀಕರ ಅಪಘಾತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಈ ಯುವಕ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ಬಸ್ಸೊಂದು ಆತನ ಮೇಲೆಯೇ ನುಗ್ಗಿದೆ. https://t.co/UCzxU3IFpG
— News Not Out (@News_Not_Out) December 3, 2024
ಚಾಲಕ ಬಸ್ ಅನ್ನು ರಿವರ್ಸ್ ತೆಗೆಯಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯುವಕ ಅಪಾಯದಿಂದ ಪಾರಾಗಿದ್ದು, ಆತನ ಮೊಣಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Click