ನ್ಯೂಸ್ ನಾಟೌಟ್: ಬಸ್ ಹಾಗೂ ಕಾರು ನಡುವೆ ಜೋಡುಪಾಲದ ಬಳಿ ಅಪಘಾತ ನಡೆದಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ದುರ್ಘಟನೆಯಲ್ಲಿ ಕಾರು ಜಖಂಗೊಂಡಿದೆ. ಮಡಿಕೇರಿ ಕಡೆಗೆ ಹೋಗುತ್ತಿದ್ದ ಬಸ್ ಅನ್ನು ಕಾರಿನವ ಓವರ್ ಟೇಕ್ ಮಾಡಿಕೊಂಡು ಹೋಗಿದ್ದಾನೆ. ಈ ವೇಳೆ ಎದುರಿನಿಂದ ಕಾರೊಂದು ಬಂದ ಹಿನ್ನೆಲೆಯಲ್ಲಿ ಓವರ್ ಟೇಕ್ ಮಾಡುತ್ತಿದ್ದ ಕಾರಿನವ ಎಡಗಡೆಗೆ ಸ್ಟೇರಿಂಗ್ ತಿರುಗಿಸಿದ್ದಾನೆ. ಪರಿಣಾಮ ಬಸ್ ನ ಮುಂಭಾಗ ತಾಗಿ ಕಾರು ಜಖಂಗೊಂಡಿದೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.