ನ್ಯೂಸ್ ನಾಟೌಟ್ : ತಾನು ಪ್ರೀತಿಸಿದ ಹುಡುಗ ಸಿಗಲಿಲ್ಲ ಎಂದು ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯತಮೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಇತ್ತ ಪ್ರಿಯಕರ ಸಹ ನೇಣು ಬಿಗಿದುಕೊಂಡಿದ್ದಾನೆ.
ಈ ಘಟನೆ ಮಂಡ್ಯದ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಕೆಗೆ 20 ವರ್ಷ. ಪ್ರಸನ್ನ ಎಂಬ ಆತನಿಗೂ 25ರ ಹರೆಯ.
ಆತ್ಮಹತ್ಯೆಗೆ ಶರಣಾದ ಸೃಷ್ಟಿ, ಪ್ರಸನ್ನ ಇಬ್ಬರೂ ಪ್ರೇಮಿಗಳು. ಆದರೆ ವಿವಾಹಿತರು ಎನ್ನಲಾಗಿದೆ. ಒಂದೂವರೆ ವರ್ಷದ ಹಿಂದೆ ಸೃಷ್ಟಿಗೆ ದಿನೇಶ್ ಎನ್ನುವರ ಜೊತೆ ಮದುವೆಯಾಗಿದ್ರೆ, ಪ್ರಸನ್ನ ಸೃಷ್ಟಿಯ ಗೆಳತಿ ಸ್ಪಂದನಾಳನ್ನ ಮದುವೆಯಾಗಿದ್ದ ಎನ್ನಲಾಗಿದೆ. ಮದ್ವೆಯಾಗಿದ್ದರೂ ಸಹ ಇಬ್ಬರ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೀತಿಯ ವಿಷಯ ಸೃಷ್ಟಿ ಗಂಡನಿಗೆ ಗೊತ್ತಾಗಿದೆ.
ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಯಾಗಿದೆ. ಬಳಿಕ ಸೃಷ್ಟಿ ಡಿಸೆಂಬರ್ 11ರಂದು ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ಆದರೆ, ಎಲ್ಲಿ ಹೋಗಿದ್ದಾಳೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದಿನೇಶ್ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಸನ್ನನ ಜೊತೆ ಹೋಗಿರಬಹುದು ಎಂದು ದೂರು ನೀಡಿದ್ದ. ಆದ್ರೆ ಡಿಸೆಂಬರ್ 16ರಂದು ಶಿಂಷಾ ನದಿಯಲ್ಲಿ ಸೃಷ್ಟಿಯ ಶವ ಪತ್ತೆಯಾಗಿದೆ.
ಮದ್ದೂರು ಪೊಲೀಸರು ಮೃತದೇಹವನ್ನು ಗುರುತಿಸಿ ಸೃಷ್ಟಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಪ್ರಿಯತಮ ಪಸನ್ನ, ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Click