ನ್ಯೂಸ್ ನಾಟೌಟ್ : ಭಾರತದಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಕತ್ತೆಗಳು ನಾಪತ್ತೆ ಆಗುತ್ತಿದ್ದು, ಇದಕ್ಕೆ ಚೀನಾ ದೇಶವೇ ಕಾರಣ ಎನ್ನಲಾಗಿದೆ. ಚೀನಾ ಭಾರತದ ಕತ್ತೆಗಳನ್ನು ಯಾವ ರೀತಿಯಾಗಿ ತರಿಸಿಕೊಳ್ಳುತ್ತದೆ? ಹಾಗೂ ಇಷ್ಟೊಂದು ಕತ್ತೆಗಳನ್ನು ಏನು ಮಾಡುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದಕ್ಕೆ ಕಳ್ಳಸಾಗಣೆಯ ಜಾಲವೊಂದು ಬೆಳಕಿಗೆ ಬರುತ್ತಿದೆ. ಕತ್ತೆಗಳು ಮತ್ತು ಅವುಗಳ ಚರ್ಮದ ಕಳ್ಳಸಾಗಣೆ ನೇಪಾಳದ ಮೂಲಕ ಚೀನಾಕ್ಕೆ ತಲುಪುತ್ತಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಈ ಜಾಲದಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಕತ್ತೆಗಳನ್ನು ಗುರಿಯಾಗಿಸಲಾಗುತ್ತಿದೆ. ಕತ್ತೆಗಳ ಚರ್ಮವನ್ನು ಚೀನಾದಲ್ಲಿ ಸಾಂಪ್ರದಾಯಿಕ ಔಷಧಿಗಳಿಗೆ ಬಳಸಲಾಗುತ್ತದೆ. ಇದನ್ನು ಪುರುಷ ಶಕ್ತಿ ಮತ್ತು ಸೌಂದರ್ಯವರ್ಧಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎನ್ನಲಾಗಿದೆ.
ಭಾರತ ಮತ್ತು ನೇಪಾಳದ ನಡುವೆ ಸುಮಾರು 1,500 ಕಿಲೋಮೀಟರ್ಗಳಷ್ಟು ಮುಕ್ತ ಗಡಿ ಇದೆ. ಇದನ್ನು ಕಳ್ಳಸಾಗಣೆದಾರರು ತಮ್ಮ ಅಕ್ರಮ ಕೆಲಸಗಳಿಗೆ ಬಳಸುತ್ತಿದ್ದಾರೆ. ನೇಪಾಳದ ಗಡಿಯಲ್ಲಿ ಕತ್ತೆಗಳನ್ನು ಮೇಯಲು ಬಿಡಲಾಗುತ್ತದೆ. ಮತ್ತು ಅವಕಾಶ ಸಿಕ್ಕಾಗ ಅವುಗಳನ್ನು ನೇಪಾಳಕ್ಕೆ ಓಡಿಸಲಾಗುತ್ತದೆ. ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಹಲವು ಬಾರಿ ಗಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಕತ್ತೆಗಳ ಸಮೇತ ಹಲವರನ್ನು ಹಿಡಿದಿದೆ. ಕತ್ತೆಗಳನ್ನು ಭಾರತದ ವಿವಿಧ ರಾಜ್ಯಗಳಿಂದ ತಂದು ಬಿಹಾರ ಮತ್ತು ಆಂಧ್ರ ಪ್ರದೇಶದಂತಹ ಪ್ರಾಂತ್ಯಗಳಲ್ಲಿ ಅವುಗಳನ್ನು ಕೊಲ್ಲಲಾಗುತ್ತದೆ. ಚರ್ಮವನ್ನು ಸಣ್ಣ ವಾಹನಗಳು, ದ್ವಿಚಕ್ರ ವಾಹನಗಳು ಅಥವಾ ಸೈಕಲ್ಗಳ ಮೂಲಕ ನೇಪಾಳಕ್ಕೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಚೀನಾಕ್ಕೆ ರವಾನಿಸಲಾಗುತ್ತದೆ.
Click