ಆಸ್ಪತ್ರೆ ಬೆಡ್ ನಲ್ಲಿರುವ ಆರೋಪಿ ದರ್ಶನ್‌ ಫೋಟೋ ವೈರಲ್‌, ನಾಳೆ(ಡಿ.3) ಮತ್ತೆ ಜಾಮೀನು ಅರ್ಜಿ ವಿಚಾರಣೆ..!

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಇಂದು(ಡಿ.2) ಭಾರೀ ವೈರಲ್ ಆಗುತ್ತಿದೆ. 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್‌ ಕಳೆದ 4 ವಾರಗಳಿಂದ ಬಿಜಿಎಸ್‌ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ರೆಗ್ಯೂಲರ್‌ ಬೇಲ್‌ ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಸೋಮವಾರ (ಡಿ.3) ವಿಚಾರಣೆ ಮುಂದುವರಿಯಲಿದೆ, ಈ ನಡುವೆ ದರ್ಶನ್‌ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ. ತುರ್ತು ಚಿಕಿತ್ಸೆಗಾಗಿಯೇ ಹೈಕೋರ್ಟ್ ನಟ ದರ್ಶನ್‌ ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚಿಕಿತ್ಸೆಗಾಗಿಯೇ ದರ್ಶನ್ ಬೆಂಗಳೂರಿಗೆ ಬಂದು 32 ದಿನಗಳು ಮುಗಿದು ಹೋಗಿವೆ. ಇನ್ನೂ 9 ದಿನಗಳು ಕಳೆದರೆ ಮತ್ತೆ ದರ್ಶನ್ ಜೈಲಿಗೆ ವಾಪಸ್ಸಾಗಬೇಕು. ಅಷ್ಟರಲ್ಲಿ ರೆಗ್ಯೂಲರ್‌ ಬೇಲ್‌ ಸಿಕ್ಕರೆ ದರ್ಶನ್‌ ಸೇಫ್‌ ಅಂತ ಹೇಳಲಾಗ್ತಿದೆ.ಸದ್ಯಕ್ಕೆ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಆಗಿಲ್ಲ. ಕಾರಣ, ಅವರು ರಕ್ತದೊತ್ತಡದಿಂದ ಬಳಲ್ತಾ ಇದ್ದಾರೆ ಎನ್ನಲಾಗಿದೆ. Click