ನ್ಯೂಸ್ ನಾಟೌಟ್ : ಇಲ್ಲೊಂದು ಸರ್ಕಾರಿ ಕಛೇರಿ ನೌಕರರು ಹಿರಿಯ ವೃದ್ಧ ದಂಪತಿಗೆ ಸರಿಯಾದ ಸೇವೆ ನೀಡದೆ ಅವರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ. ನೌಕರರ ಈ ವರ್ತನೆಯಿಂದ ಕೋಪಕೊಂಡ ಸಿಇಒ ನೀವು ಕೂಡಾ ಹೀಗೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಶಿಕ್ಷೆಯನ್ನು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ತಮ್ಮ ಕೆಲಸದ ನಿಮಿತ್ತ ಸರ್ಕಾರಿ ಕಛೇರಿಯೊಂದಕ್ಕೆ ಬಂದಿದ್ದ ವೃದ್ಧ ದಂಪತಿಗೆ ಅಲ್ಲಿನ ನೌಕರರು ಸರಿಯಾದ ಸಮಯಕ್ಕೆ ಸೇವೆಯನ್ನು ಒದಗಿಸದೆ 50 ನಿಮಿಷಗಳಿಗೂ ಹೆಚ್ಚು ಹೊತ್ತು ಕಾಯುವಂತೆ ಮಾಡಿದ್ದಾರೆ. ಈ ದೃಶ್ಯವನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ʼನೀವು ಕೂಡಾ ಹೀಗೆ 30 ನಿಮಿಷಗಳ ಕಾಲ ನಿಂತುಕೊಂಡು ಕೆಲಸ ಮಾಡಿʼ ಎಂದು ಅಲ್ಲಿದ್ದ 16 ನೌಕರರಿಗೆ ಸ್ಟ್ಯಾಂಡ್ ಅಪ್ ಶಿಕ್ಷೆಯನ್ನು ನೀಡಿದ್ದಾರೆ.
ವರದಿಗಳ ಪ್ರಕಾರ ಹೊಸ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಡಾ. ಲೋಕೇಶ್ ವೃದ್ಧ ವ್ಯಕ್ತಿಯನ್ನು ಕಾಯಿಸಿದ 16 ನೌಕರರಿಗೆ 30 ನಿಮಿಷಗಳ ಕಾಲ ನಿಂತುಕೊಂಡೇ ಕೆಲಸ ಮಾಡಿ ಎಂಬ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದ್ದಾರೆ. ಕಛೇರಿಗೆ ಭೇಟಿ ನೀಡುವ ಹಿರಿಯ ನಾಗರಿಕರನ್ನು ಕಾಯಿಸದೆ ಅವರ ಕೆಲಸವನ್ನು ಬೇಗ ಮಾಡಿ ಕೊಡಿ ಎಂದು ಡಾ. ಲೋಕೇಶ್ ಆದೇಶಿಸಿದರೂ, ಇದಕ್ಕೆ ಕ್ಯಾರೇ ಅನ್ನದೆ ಹಿರಿಯ ವ್ಯಕ್ತಿಯನ್ನು ಕಾಯಿಸಿದ ಎಲ್ಲಾ ನೌಕಕರಿಗೆ ಛೀಮಾರಿ ಹಾಕಿ ಶಿಕ್ಷೆಯ ರೂಪದಲ್ಲಿ 30 ನಿಮಿಷಗಳ ಕಾಲ ನಿಂತುಕೊಂಡು ಕೆಲಸ ಮಾಡುವಂತೆ ಆದೇಶಿಸಿದ್ದಾರೆ.
Click