- +91 73497 60202
- [email protected]
- December 5, 2024 12:22 AM
ಜಗತ್ತಿನ ಅತಿದೊಡ್ಡ ಚಿನ್ನದ ನಿಕ್ಷೇಪ ಚೀನಾದಲ್ಲಿ ಪತ್ತೆ..! ಈ ಬಗ್ಗೆ ಭೂಗರ್ಭಶಾಸ್ತ್ರಜ್ಞರು ಹೇಳಿದ್ದೇನು..?
ನ್ಯೂಸ್ ನಾಟೌಟ್: ಚೀನಾದಲ್ಲಿ ವಿಶ್ವದ ಅತಿ ದೊಡ್ಡ ಚಿನ್ನದ ಅದಿರು ನಿಕ್ಷೇಪ ಪತ್ತೆಯಾಗಿದ್ದು, ಇದರಲ್ಲಿ 1 ಸಾವಿರ ಮೆಟ್ರಿಕ್ ಟನ್ ಅತ್ಯುತ್ತಮ ಗುಣಮಟ್ಟದ ಸ್ವರ್ಣವಿದೆ ಎಂದು ಅಲ್ಲಿನ ಭೂಗರ್ಭಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇದರ ಮೌಲ್ಯ ಬರೋಬ್ಬರಿ 7 ಲಕ್ಷ ಕೋಟಿ ರೂ. (83 ಬಿಲಿಯ ಡಾಲರ್) ಆಗಿದೆ ಎನ್ನಲಾಗಿದೆ. ಈ ಮೂಲಕ 900 ಮೆಟ್ರಿಕ್ ಟನ್ ಚಿನ್ನದ ಅದಿರು ಹೊಂದಿರುವ ದಕ್ಷಿಣ ಆಫ್ರಿಕಾದ ಸೌತ್ ಡೀಪ್ ಗಣಿಯ ದಾಖಲೆಯನ್ನು ಚೀನಾ ಹಿಂದಿಕ್ಕಿ, ಚಿನ್ನ ನಿಕ್ಷೇಪದಲ್ಲಿ ಜಗತ್ತಿನ ನಂಬರ್ 1 ಸ್ಥಾನಕ್ಕೆ ಏರಿದೆ. ಪಿಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಭೂಮಿಯ ಮೇಲ್ಮೈಯಿಂದ 2 ಕಿ.ಮೀ. ಆಳದಲ್ಲಿ 40 ಚಿನ್ನದ ಶಿಲೆಗಳು ಪತ್ತೆಯಾಗಿದ್ದು, ಪ್ರಾಥಮಿಕವಾಗಿ 300 ಮೆಟ್ರಿಕ್ ಟನ್ ಚಿನ್ನದ ಅದಿರು ಇದೆ. 3 ಕಿ.ಮೀ. ವರೆಗೆ ಆಳಕ್ಕೆ ಸಾಗಿದರೆ 1,000 ಮೆಟ್ರಿಕ್ ಟನ್ ವರೆಗೆ ಚಿನ್ನದ ಅದಿರು ದೊರೆಯಬಹುದು. ಜತೆಗೆ ಇಲ್ಲಿನ ಪ್ರತೀ ಟನ್ ಅದಿರಿನಿಂದ 138 ಗ್ರಾಂ ಅತ್ಯುತ್ತಮ ಗುಣಮಟ್ಟದ ಚಿನ್ನ ದೊರೆಯಬಹುದು ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ