ದೇಶದಾದ್ಯಂತ ಶೈಕ್ಷಣಿಕ ಪಠ್ಯ ಪುಸ್ತಕಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಜೊತೆ ಸರ್ಕಾರದ ಒಪ್ಪಂದ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : NCERT ಪಠ್ಯಪುಸ್ತಕಗಳನ್ನು ದೇಶದೆಲ್ಲೆಡೆ ಮಾರಾಟ ಮಾಡಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದಇ-ಕಾಮರ್ಸ್ ಮಾರ್ಕೆಟ್ ಆಗಿರುವ ಫ್ಲಿಪ್ ಕಾರ್ಟ್, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಜೊತೆಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶಾದ್ಯಂತ NCERT ಪುಸ್ತಕಗಳು ಕೈಗೆಟುಕುವ ಮತ್ತು ತಡೆರಹಿತವಾಗಿ ಲಭ್ಯವಾಗುವಂತೆ ಮಾಡುವುದು ಈ ಮಹತ್ವದ ಒಪ್ಪಂದದ ಉದ್ದೇಶವಾಗಿದೆ ಎಂದು ವರದಿ ತಿಳಿಸಿದೆ. ಫ್ಲಿಪ್ ಕಾರ್ಟ್ ನ ಸೇವೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮತ್ತು ಕಲಿಯುವವರಿಗೆ NCERT ಪಠ್ಯಗಳನ್ನು ಈ ಮೂಲಕ ಪೂರೈಸಲಾಗುತ್ತದೆ. ಈ ಸಹಭಾಗಿತ್ವದಡಿಯಲ್ಲಿ ಫ್ಲಿಪ್ ಕಾರ್ಟ್ ತನ್ನ ಆನ್ಲೈನ್ ಮಾರ್ಕೆಟ್ ಪ್ಲೇಸ್ ಮೂಲಕ NCERT ಪಠ್ಯಗಳನ್ನು ಮಾರಾಟ ಮತ್ತು ವಿತರಣೆ ಮಾಡಲಿದೆ. ಇದರೊಂದಿಗೆ NCERT ನಿಂದ ನಿಗದಿಪಡಿಸಿದ ಅಧಿಕೃತ ಮಾರಾಟಗಾರರ ಮೂಲಕ ಹೆಚ್ಚಿನ ಜನರನ್ನು ತಲುಪಬಹುದು ಎನ್ನಲಾಗಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಜಯಂತ್ ಚೌಧರಿ ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ (Chief Corporate affairs officer) ರಜನೀಶ್ ಕುಮಾರ್ ಉಪಸ್ಥಿತಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ದೆಹಲಿಯ NCERT(National Council of Educational Research and Training) ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವಾಲಯ ಮತ್ತು NCERT ಅಧಿಕಾರಿಗಳು ಮತ್ತು ಫ್ಲಿಪ್ ಕಾರ್ಟ್ ಅಧಿಕಾರಿಗಳು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು. ಇದು ದೇಶಾದ್ಯಂತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶವನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎನ್ನಲಾಗುತ್ತಿದೆ. ಈ ಸಹಯೋಗದಡಿ ಫ್ಲಿಪ್ ಕಾರ್ಟ್ ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ NCERT ಪಠ್ಯಗಳನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡಲಿದೆ. Click