ಚಂಡಮಾರುತದ ಹೊಡೆತಕ್ಕೆ ಸಿಲುಕಿ ಲ್ಯಾಂಡ್ ಆಗಲು ಪರದಾಡಿದ ವಿಮಾನ..! ಚೆನ್ನೈ ವಿಮಾನ ನಿಲ್ದಾಣದ ಭಯಾನಕ ದೃಶ್ಯ ಸೆರೆ..!

ನ್ಯೂಸ್ ನಾಟೌಟ್: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು ಭಾನುವಾರ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿಯನ್ನು ದಾಟಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾನುವಾರ ಮುಂಜಾನೆ 4 ಗಂಟೆಯವರೆಗೆ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇದಾದ ಬಳಿಕ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಿದ್ದು ಈ ವೇಳೆ ಚೆನೈ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಇಂಡಿಗೋ ಏರ್‌ ಲೈನ್ಸ್‌ ನ ಏರ್‌ ಬಸ್ A320 ನಿಯೋ ವಿಮಾನ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಲ್ಯಾಂಡ್ ಆಗಲು ಪರದಾಡುವಂತಾಯಿತು. ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲಿ ಗಾಳಿಯ ಹೊಡೆತಕ್ಕೆ ಹೆಣಗಾಡುವಂತಾಗಿದೆ. ಬಳಿಕ ಮತ್ತೆ ಆಕಾಶಕ್ಕೆ ಹಾರಿದ ವಿಮಾನ ವಾತಾವರಣ ತಿಳಿಗೊಂಡ ಬಳಿಕ ಲ್ಯಾಂಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಕೊನೆ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ. Click